alex Certify ಧೂಮಪಾನ ಮಾಡುವವರು ತಪ್ಪದೇ ಮಾಡಿಸಿ ಈ ಟೆಸ್ಟ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೂಮಪಾನ ಮಾಡುವವರು ತಪ್ಪದೇ ಮಾಡಿಸಿ ಈ ಟೆಸ್ಟ್‌

ಧೂಮಪಾನ ಮಾಡುವವರು ಶ್ವಾಸಕೋಶದ ಕಾಯಿಲೆ, ಹೃದ್ರೋಗ ಮತ್ತು ಇತರ ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಇದು ಅವರ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಅಲ್ಲದೇ ಧೂ,ಪಾನ ಮಾಡುವವರ ಸುತ್ತಮುತ್ತಲಿನ ಜನರು ಕೂಡ ಅಪಾಯಕ್ಕೆ ಒಳಗಾಗುತ್ತಾರೆ. ಹಾಗಾಗಿ ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಜೀವವನ್ನು ಉಳಿಸಲು ನೀವು ಧೂಮಪಾನವನ್ನು ಬಿಟ್ಟುಬಿಡುವುದು ಒಳ್ಳೆಯದು. ಆದರೆ ಹೆಚ್ಚಿನ ಜನರಿಗೆ ಈ ಚಟವನ್ನು ಬಿಡಲು ಬಯಸುವುದಿಲ್ಲ. ಹಾಗಾಗಿ ಅಂತವರು ಪ್ರತಿಬಾರಿ ತಪ್ಪದೇ ಈ ಟೆಸ್ಟ್ಗಳನ್ನು ಮಾಡಿಸುವ ಮೂಲಕ ನಿಮ್ಮ ಜೀವ ಕಾಪಾಡಿಕೊಳ್ಳಿ.

ಎದೆಯ ಎಕ್ಸ್ ರೇ : ಧೂಮಪಾನಿಗಳು ಎದೆಯ ಎಕ್ಸ್ ರೇ ಮಾಡುವುದು ಬಹಳ ಮುಖ್ಯವಾಗಿದೆ. ಎಕ್ಸ್-ರೇ ನಿಮ್ಮ ಎದೆಗೂಡಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತದೆ ಮತ್ತು ಧೂಮಪಾನದಿಂದ ಉಂಟಾಗುವ ಯಾವುದೇ ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಪಲ್ಮನರಿ ಫಂಕ್ಷನ್ ಟೆಸ್ಟ್ (ಪಿಎಫ್ಟಿ) : ಪಿರೋಮೆಟ್ರಿ ಎಂದೂ ಕರೆಯುವ ಈ ಟೆಸ್ಟ್ ಒಂದು ಸರಳ ಉಸಿರಾಟದ ಪರೀಕ್ಷೆಯಾಗಿದ್ದು, ರೋಗಿಯ ಶ್ವಾಸಕೋಶದ ಒಳಗೆ ಮತ್ತು ಹೊರಗೆ ಗಾಳಿಯ ಚಲನೆ ಹೇಗಿದೆ ಎಂಬುದನ್ನು ತಿಳಿಯಲು ಮೆಷಿನ್ ಅನ್ನು ಊದಲು ಹೇಳುತ್ತಾರೆ. ಇದರಿಂದ ಧೂಮಪಾನಿಗಳ ಶ್ವಾಸಕೋಶ ಸರಿಯಾಗಿ ಕೆಲಸ ಮಾಡುತ್ತಿದೆಯೇ? ಎಂಬುದನ್ನು ತಿಳಿಯಬಹುದು.

ಸಿಟಿ ಸ್ಕ್ಯಾನ್ (ಲೋ-ಡೋಸ್ ಕಂಪ್ಯೂಟೆಡ್ ಟೊಮೊಗ್ರಫಿ (ಎಲ್ಡಿ-ಸಿಟಿ) ಸ್ಕ್ಯಾನ್) : ಶ್ವಾಸಕೋಶದ ಕ್ಯಾನ್ಸರ್ ನಂತಹ ಪ್ರಮುಖ ಸಮಸ್ಯೆಗಳನ್ನು ಪತ್ತೆಹಚ್ಚಲು ಇದು ಸಹಾಯ ಮಾಡುತ್ತದೆ. ಇದು ಆರಂಭಿಕ ಹಂತಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ನಂತಹ ಸಮಸ್ಯೆಗಳನ್ನು ಪತ್ತೆಹಚ್ಚಲು ವೈದ್ಯರಿಗೆ ಸಹಾಯ ಮಾಡುತ್ತದೆ.

ಹೈ-ಸೆನ್ಸಿಟಿವಿಟಿ ಸಿ-ರಿಯಾಕ್ಟಿವ್ ಪ್ರೋಟೀನ್ (ಎಚ್ಎಸ್-ಸಿಆರ್ಪಿ) ಪರೀಕ್ಷೆ : ಇದು ರಕ್ತ ಪರೀಕ್ಷೆಯಾಗಿದ್ದು, ಇದು ಕಡಿಮೆ ಮಟ್ಟದ ಸಿ-ರಿಯಾಕ್ಟಿವ್ ಪ್ರೋಟೀನ್ ಅನ್ನು ಕಂಡುಹಿಡಿಯುತ್ತದೆ ಮತ್ತು ನಿಮ್ಮ ದೇಹದಲ್ಲಿ ಉರಿಯೂತದ ಮಟ್ಟವನ್ನು ಅಳೆಯುತ್ತದೆ. ಜನರು ಹೃದ್ರೋಗ ಮತ್ತು ಪಾರ್ಶ್ವವಾಯುವಿಗೆ ಅಪಾಯದಲ್ಲಿದ್ದಾರೆಯೇ ಎಂದು ಕಂಡುಹಿಡಿಯಲು ಇದನ್ನು ಬಳಸಬಹುದು.

ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ): ಇದು ಧೂಮಪಾನಿಗಳ ಹೃದಯದಲ್ಲಿನ ಯಾವುದೇ ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಇದು ಹೃದಯ ಬಡಿತವನ್ನು ಪರೀಕ್ಷಿಸುತ್ತದೆ ಮತ್ತು ಆರಂಭಿಕ ಹಂತದಲ್ಲಿ ಯಾವುದೇ ಹೃದಯ ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಡಯಾಬಿಟಿಸ್ ಸ್ಕ್ರೀನಿಂಗ್: ಧೂಮಪಾನಿಗಳ ದೇಹವು ಇನ್ಸುಲಿನ್ ಅನ್ನು ಹೆಚ್ಚು ಉತ್ಪತ್ತಿ ಮಾಡುವುದಿಲ್ಲ. ಮತ್ತು ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ. ಹಾಗಾಗಿ ಧೂಮಪಾನಿಗಳು ಮಧುಮೇಹ ಸ್ಕ್ರೀನಿಂಗ್ ಪರೀಕ್ಷೆಯನ್ನು ಮಾಡಲು ವೈದ್ಯರು ಸಲಹೆ ನೀಡುತ್ತಾರೆ.

ವಿಟಮಿನ್ ಡಿ ರಕ್ತ ಪರೀಕ್ಷೆ : 40 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಧೂಮಪಾನಿಗಳು ಈ ಪರೀಕ್ಷೆಗೆ ಒಳಗಾಗಲೇಬೇಕು. ವಾಸ್ತವವಾಗಿ, ಹೆಚ್ಚಿನ ಧೂಮಪಾನಿಗಳು ಸಾಮಾನ್ಯವಾಗಿ ರಕ್ತದಲ್ಲಿ ಕಡಿಮೆ ಪ್ರಮಾಣದ ವಿಟಮಿನ್ ಡಿ ಹೊಂದಿರುತ್ತಾರೆ. ಇದು ಮೂಳೆಗಳ ಸಮಸ್ಯೆಗೆ ಕಾರಣವಾಗುತ್ತದೆ.

ಕಿಡ್ನಿ ಟೆಸ್ಟ್ : ಧೂಮಪಾನಿಗಳು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ) ಗೆ ಒಳಗಾಗುವ ಸಾಧ್ಯತೆ ಹೆಚ್ಚು. ಸಿಕೆಡಿಯನ್ನು ಆರಂಭದಲ್ಲಿ ಯಾವುದೇ ರೋಗಲಕ್ಷಣಗಳಿಂದ ಪತ್ತೆಮಾಡಲು ಸಾಧ್ಯವಿಲ್ಲ, ಆದ್ದರಿಂದ ಈ ಟೆಸ್ಟ್ ಮಾಡುವುದು ಅಗತ್ಯ.

ಈ ಮೂಲಕ ಧೂಮಪಾನಿಗಳು ಮುಂಚಿತವಾಗಿ ರೋಗಗಳನ್ನು ಪತ್ತೆಹಚ್ಚಿ ಚಿಕಿತ್ಸೆ ಪಡೆಯುವ ಮೂಲಕ ನಿಮ್ಮ ಜೀವವನ್ನು ಉಳಿಸಿಕೊಳ್ಳಬಹುದು ಮತ್ತು ಧೂಮಪಾನದಿಂದಾಗುವ ಅಪಾಯದ ಬಗ್ಗೆ ತಿಳಿದು ಅದನ್ನು ಬಿಟ್ಟು ನಾಳೆ ಉತ್ತಮ ಜೀವನ ಸಾಗಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...