ದಾವಣಗೆರೆ: ಸ್ಮೋಕ್ ಬಿಸ್ಕೆಟ್ ತಿಂದ ಬಾಲಕನೊಬ್ಬ ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಪಿ.ಬಿ.ರಸ್ತೆಯಲ್ಲಿ ರೋಬೋಟಿಕ್ ಬರ್ಡ್ಸ್ ಎಕ್ಸಿಬಿಷನ್ ಏರ್ಪಡಿಸಲಾಗಿತ್ತು. ಇಲ್ಲಿ ಬಾಲಕನೊಬ್ಬ ಸ್ಮೋಕ್ ಬಿಸ್ಕೆಟ್ ತಿಂದಿದ್ದಾನೆ. ಬಾಯಿಗೆ ಹೊಗೆ ಹೋಗುತ್ತಿದ್ದಂತೆ ಅಸ್ವಸ್ಥನಾದ ಬಾಲಕ ಪ್ರಜ್ಞೆ ಕಳೆದುಕೊಂಡಿದ್ದಾನೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಾಲಕನ ಪೋಷಕರು ಸ್ಮೋಕ್ ಬಿಸ್ಕೆಟ್ ಬಗ್ಗೆ ದಾವಣಗೆರೆ ಪಾಲಿಕೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕರಿಗಳು ಸ್ಮೋಕ್ ಬಿಸ್ಕೆಟ್ ಮಾರಾಟಕ್ಕೆ ತಡೆಯೊಡ್ಡಿದ್ದಾರೆ.
ಸ್ಮೋಕ್ ಬಿಸ್ಕೆಟ್ ನಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಮಾಡಲಾಗುತ್ತದೆ. ಅದು ಏಕಾಏಕಿ ದೇಹದ ಒಳಗೆ ಹೋದಾಗ ಉಸಿರಾಟದ ತೊಂದರೆ ಆಗುವ ಸಾಧ್ಯತೆ ಇದೆ.