ದೆಹಲಿಯ ಕನಾಟ್ ಪ್ಲೇಸ್‌ನಲ್ಲಿರುವ ಧೂಮ ಸ್ಥಾವರವು ಕೆಲಸ ಮಾಡುತ್ತಿದ್ದು, ಮಾಲಿನ್ಯದ ಮಟ್ಟದಲ್ಲಿ 80%ದಷ್ಟು ಇಳಿಕೆಯಾಗಿದೆ ಎಂದು ತೋರುತ್ತಿರುವುದಾಗಿ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಹೇಳಿಕೊಂಡಿದ್ದಾರೆ.
ಗಾಳಿ ಶುದ್ಧಗೊಳಿಸುವ ಈ ದೈತ್ಯ ಸ್ಥಾವರವು ತನ್ನ ಸುತ್ತಲಿನ ಗಾಳಿಯಲ್ಲಿರುವ ಪಿಎಂ 2.5 ಮಟ್ಟವನ್ನು 151 ಮೈಕ್ರೋಗ್ರಾಂ/ಘನಮೀಟರ್‌ನಿಂದ 38 ಮೈಕ್ರೋಗ್ರಾಂ/ಘನಮೀಟರ್‌ವರೆಗೂ ಇಳಿಸಿದ್ದು, ಪಿಎಂ10 ಸಾಂದ್ರತೆಯನ್ನು 165 ಮೂಕ್ರೋಗ್ರಾಂ/ಘನಮೀಟರ್‌ನಿಂದ 41ಮೈಕ್ರೋಗ್ರಾಂ/ಘನಮೀಟರ್‌ಗೆ ಇಳಿಸಿರುವುದಾಗಿ ರೈ ತಿಳಿಸಿದ್ದಾರೆ.
ಅಕ್ಟೋಬರ್ ನಲ್ಲಿ ಪ್ರತಿ ದಿನ 1 ಕೋಟಿ ಲಸಿಕೆ ನೀಡಲು ನಡೆದಿದೆ ತಯಾರಿ
ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ 16 ಮಂದಿ, ಐಐಟಿ-ಬಾಂಬೆಯ, ಎನ್‌ಬಿಸಿಸಿ ಹಾಗೂ ಟಾಟಾ ಪ್ರಾಜೆಕ್ಟ್ಸ್‌ನ ತಜ್ಞರನ್ನೊಳಗೊಂಡ ತಂಡವನ್ನು ಧೂಮ ಸ್ಥಾವರದ ಉಸ್ತುವಾರಿಗೆ ನೇಮಿಸಲಾಗಿದೆ.
“ಎರಡು ವರ್ಷಗಳ ಅಧ್ಯಯನವನ್ನು ಆಧರಿಸಿ ಮೂರು ತಿಂಗಳಲ್ಲಿ ಸಮಿತಿಯು ವರದಿ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ನಗರದ ಇತರೆಡೆಗಳಲ್ಲೂ ಧೂಮ ಸ್ಥಾವರಗಳನ್ನು ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು,” ಎಂದು ಸಚಿವರು ತಿಳಿಸಿದ್ದಾರೆ.
11 ವರ್ಷಗಳ ನಂತ್ರ ಮಹಾಲಯ ಅಮವಾಸ್ಯೆಯಂದು ಕೂಡಿ ಬಂದಿದೆ ಶುಭಯೋಗ
24 ಮೀಟರ್‌ನಷ್ಟು ಎತ್ತರವಿರುವ ಸ್ಥಾವರವನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗಸ್ಟ್ 23ರಂದು ಉದ್ಘಾಟಿಸಿದ್ದರು. ತನ್ನ ಸುತ್ತಲಿನ ಒಂದು ಕಿಮೀ ವ್ಯಾಸದಲ್ಲಿರುವ ಗಾಳಿಯನ್ನು ಪ್ರತಿ ಸೆಕೆಂಡ್‌ಗೆ 1000 ಘನಮೀಟರ್ ದರದಲ್ಲಿ ಈ ಸ್ಥಾವರ ಶುದ್ಧಗೊಳಿಸಬಲ್ಲದು.
ಸ್ಥಳೀಯವಾಗಿಯೇ ಕಡಿಮೆ ವೆಚ್ಚದಲ್ಲಿ ಫಿಲ್ಟರ್‌ಗಳು ಹಾಗೂ ಫ್ಯಾನ್‌ಗಳನ್ನು ಉತ್ಪಾದಿಸುವ ಮೂಲಕ ಇನ್ನಷ್ಟು ಕಡಿಮೆ ವೆಚ್ಚದಲ್ಲಿ ಈ ಸ್ಥಾವರಗಳ ನಿರ್ಮಾಣ ಮಾಡಲು ಅಧ್ಯಯನ ಉದ್ದೇಶಿಸಿದೆ.
ಮಾಲಿನ್ಯ ನಿಯಂತ್ರಣ ಮಾಡುವುದು ಈಗಿನ ಜಾಗತಿಕ ಸವಾಲು. ವಿವಿಧ ತಂತ್ರಜ್ಞಾನದ ಮೂಲಕ ಎಲ್ಲೆಡೆ ಪ್ರಯತ್ನಗಳು ನಡೆದಿವೆ. ದೆಹಲಿಯಲ್ಲಿ ನಡೆದಿರುವ ಈ ಪ್ರಯತ್ನ ಒಳ್ಳೆಯ ಬೆಳವಣಿಗೆಯಾಗಿದೆ.