ಸ್ಮಾರ್ಟ್ಫೋನ್ ಈಗ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಜನರು ಸ್ಮಾರ್ಟ್ಫೋನ್ ನಲ್ಲಿ ಸಮಯ ಹಾಳು ಮಾಡ್ತಾರೆ. ಸದಾ ಫೋನ್ ಬಳಕೆ ಮಾಡುವವರಿಗೆ ಇಲ್ಲೊಂದು ಸುದ್ದಿಯಿದೆ. ಸ್ಮಾರ್ಟ್ಫೋನ್ ನಲ್ಲಿ ಸಾಮಾಜಿಕ ಜಾಲತಾಣ ವೀಕ್ಷಣೆ ಮಾಡಿ, ಸಮಯ ಹಾಳು ಮಾಡುವ ಬದಲು, ಅದ್ರಿಂದ ಗಳಿಸುವ ವಿಧಾನ ತಿಳಿದುಕೊಳ್ಳಿ.
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅನೇಕ ಅಪ್ಲಿಕೇಷನ್ ಗಳಿವೆ. ಈ ಅಪ್ಲಿಕೇಷನ್ ಗಳು, ಬಳಕೆದಾರರಿಗೆ ಹಣ ಗಳಿಸಲು ಅವಕಾಶ ನೀಡುತ್ತವೆ. ಕೆಲ ಕಂಪನಿಗಳು ಗೇಮ್ಸ್ ಗೆ ಹಣ ನೀಡುತ್ತವೆ. ನೀವು ಆಟವಾಡಿ, ಆಟ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಬೇಕು. ಇದಕ್ಕೆ ಕಂಪನಿ ಹಣ ನಿಗದಿಪಡಿಸುತ್ತದೆ. ನೀವು ಎಷ್ಟು ಸಮಯ ಆಟದಲ್ಲಿ ಕಳೆಯುತ್ತೀರಿ ಎನ್ನುವುದರ ಮೇಲೆ ಹಣ ನೀಡಲಾಗುತ್ತದೆ. ತಿಂಗಳಿಗೆ 50 ಸಾವಿರ ರೂಪಾಯಿ ಗಳಿಸುವವರೂ ಇದ್ದಾರೆ.
ಭಾವುಕರನ್ನಾಗಿಸುವಂತೆ ಮಾಡಿದ ತಂದೆ – ಮಗಳ ಅದ್ಭುತ ನೃತ್ಯ: ವಿಡಿಯೋ ವೈರಲ್
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕೆಲ ಕಂಪನಿಗಳು ಸರ್ವೆ ನಡೆಸುತ್ತವೆ. ಆ ಸರ್ವೆಗಳಲ್ಲಿ ನೀವು ಪಾಲ್ಗೊಂಡು ಹಣ ಗಳಿಸಬಹುದು. ಕಂಪನಿ ಕೇಳಿದ ಪ್ರಶ್ನೆಗೆ ಉತ್ತರ ನೀಡಬೇಕಾಗುತ್ತದೆ. ದಿನಕ್ಕೆ 800 ರಿಂದ 1500 ರ ವರೆಗೆ ಇದ್ರಲ್ಲಿ ಗಳಿಸಬಹುದು. ಆದ್ರೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಯಾವುದೇ ಸರ್ವೆ ಅಥವಾ ಗೇಮ್ಸ್ ಡೌನ್ಲೋಡ್ ಮಾಡುವ ಮೊದಲು ಅದರ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು. ಎಟಿಎಂ ಕಾರ್ಡ್ ನಂಬರ್ ಸೇರಿದಂತೆ ಒಟಿಪಿಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ.