ಇದು ಸ್ಮಾರ್ಟ್ ಫೋನ್ ಯುಗ. ಪ್ರತಿಯೊಬ್ಬರ ಕೈನಲ್ಲೂ ಮೊಬೈಲ್ ಇದ್ದೇ ಇರುತ್ತೆ. ಮೊಬೈಲ್ ನಲ್ಲಿ ಎಷ್ಟೇ ಸ್ಟೊರೇಜ್ ವ್ಯವಸ್ಥೆ ಇದ್ದರೂ ಹತ್ತು ಹಲವು ಅಪ್ಲಿಕೇಷನ್ ಗಳು, ಫೋಟೋಗಳು, ವಿಡಿಯೋಗಳ ಮೂಲಕ ಮೊಬೈಲ್ ಸ್ಟೊರೇಜ್ ಫುಲ್ ಆಗುತ್ತದೆ. ಮೊಬೈಲ್ ನಲ್ಲಿ ಸ್ಥಳ ಇಲ್ಲದೇ ಇದ್ದಾಗ ಮೊಬೈಲ್ ಒಂದಲ್ಲ ಒಂದು ರೀತಿ ಹಾಳಾಗುತ್ತದೆ. ಇಂತಹ ಕೆಲವು ಸ್ಟೊರೇಜ್ ಸಮಸ್ಯೆಗಳನ್ನು ಬಗೆಹರಿಸಲು ಸುಲಭ ಪರಿಹಾರ ಇಲ್ಲಿದೆ.
ಆನ್ ಲೈನ್ ಫೋಟೋ ಮತ್ತು ವಿಡಿಯೋಗಳನ್ನು ಸೇವ್ ಮಾಡಬೇಡಿ. ಮೊಬೈಲ್ ನಲ್ಲಿ ಹೆಚ್ಚಿನ ಸ್ಥಳ ತಿನ್ನುವುದು ಫೋಟೋ ಮತ್ತು ವಿಡಿಯೋಗಳು. ಈ ತೊಂದರೆಯಿಂದ ದೂರವಾಗಲು ಫೋಟೋ ಮತ್ತು ವಿಡಿಯೋವನ್ನು ಮೊಬೈಲ್ ನಲ್ಲಿ ಸೇವ್ ಮಾಡುವ ಬದಲು ಕ್ಲೌಡ್ ಸ್ಟೊರೇಜ್ ನಲ್ಲಿ ಸೇವ್ ಮಾಡಬಹುದು. ಎಲ್ಲ ಗೂಗಲ್ ಅಕೌಂಟ್ ಜೊತೆ ಬಳಕೆದಾರರಿಗೆ 15 ಜಿಬಿ ಫ್ರೀ ಸ್ಟೊರೇಜ್ ವ್ಯವಸ್ಥೆ ಇರುತ್ತದೆ. ಹಾಗಾಗಿ ನೀವು ಅಲ್ಲಿ ಫೋಟೋ, ವಿಡಿಯೋವನ್ನು ಸೇವ್ ಮಾಡಬಹುದು.
ವಾಟ್ಸಾಪ್ ಫೋನ್ ಸ್ಟೋರೇಜ್ ಖಾಲಿ ಮಾಡುತ್ತೆ. ಈಗ ಎಲ್ಲವೂ ವಾಟ್ಸಾಪ್ ಆಗಿದೆ. ವಾಟ್ಸಾಪ್ ನಲ್ಲಿ ಶೇರ್ ಮಾಡಿದ ಫೋಟೋ, ವಿಡಿಯೋಗಳೆಲ್ಲವೂ ಗ್ಯಾಲರಿಯಲ್ಲಿ ಸೇವ್ ಆಗಿ ಫೋನ್ ಸ್ಟೋರೇಜ್ ಕಡಿಮೆಯಾಗುತ್ತೆ. ಹಾಗಾಗಿ ವಾಟ್ಸಾಪ್ ಸೆಟ್ಟಿಂಗ್ ಗೆ ಹೋಗಿ ಮೀಡಿಯಾ ವಿಜಿಬಲಿಟಿ ಆಪ್ಶನ್ ಅನ್ನು ಆಫ್ ಮಾಡಿ. ಹೀಗೆ ಮಾಡುವುದರಿಂದ ಫೋಟೋ, ವಿಡಿಯೋ ಫೋನ್ ನಲ್ಲಿ ಸೇವ್ ಆಗುವುದಿಲ್ಲ.
ಸ್ಮಾರ್ಟ್ ಫೋನ್ ನಲ್ಲಿರುವ ಅಪ್ಲಿಕೇಷನ್ ಗಳನ್ನು ತೆರೆದಂತೆ ಮೊಬೈಲ್ ನಲ್ಲಿ ಅದು ಸ್ಟೋರ್ ಆಗುತ್ತಾ ಹೋಗುತ್ತದೆ. ಅದನ್ನು ನೀವು ಫೋನ್ ಸೆಟ್ಟಿಂಗ್ ನಲ್ಲಿ ಅಪ್ಲಿಕೇಶನ್ ಗೆ ಹೋಗಿ ಸುಲಭವಾಗಿ ತೆಗೆಯಬಹುದು.
ಕೆಲವು ಅಪ್ಲಿಕೇಷನ್ ಗಳನ್ನು ನಾವು ಬಳಸುವುದೇ ಇಲ್ಲ. ಆದರೂ ಅದು ನಮ್ಮ ಮೊಬೈಲ್ ನಲ್ಲಿ ಇರುತ್ತದೆ. ಇಂತಹ ಅಪ್ಲಿಕೇಷನ್ ಗಳು ಸುಮ್ಮನೆ ಸ್ಟೋರೇಜ್ ಸಮಸ್ಯೆ ಉಂಟುಮಾಡುತ್ತವೆ. ಹಾಗಾಗಿ ಅಂತಹ ಅಪ್ಲಿಕೇಷನ್ ಗಳನ್ನು ಮೊದಲು ಅನ್ಇನ್‌ಸ್ಟಾಲ್ ಮಾಡಿ. ಅವಶ್ಯವಿದ್ದಾಗ ಇನ್ಸ್ಟಾಲ್ ಮಾಡಿಕೊಳ್ಳಬಹುದು.
ಕೆಲವೊಬ್ಬರು ಮೊಬೈಲ್ ನಲ್ಲಿ ಫಿಲ್ಮ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ನೋಡುತ್ತಾರೆ. ಹೀಗೆ ಮಾಡುವುದರಿಂದ ಮೊಬೈಲ್ ನಲ್ಲಿ ಸ್ಟೋರೇಜ್ ಕಡಿಮೆಯಾಗುತ್ತಾ ಬರುತ್ತದೆ. ಅದಕ್ಕಾಗಿ ಅಂತಹ ದೊಡ್ಡ ಫೈಲ್ಸ್ ಗಳನ್ನು ಮೊದಲು ತೆಗೆದುಹಾಕಿ.