ಸ್ಮಾರ್ಟ್‌ಫೋನ್ ಬಳಸುವ ಸಂದರ್ಭಗಳಲ್ಲಿ ಕೆಲವೊಮ್ಮೆ ಡಿವೈಸ್ ಅತಿಯಾಗಿ ಬಿಸಿಯಾಗಲು ಆರಂಭಿಸುತ್ತದೆ. ಫೋನ್‌ನಲ್ಲಿ ಮಾತನಾಡುವಾಗ ಅಥವಾ ಇಂಟರ್ನೆಟ್ ಬಳಸುವ ಸಂದರ್ಭದಲ್ಲಿ ಫೋನ್ ಬಿಸಿಯಾಗುತ್ತದೆ. ಕೆಲವೊಮ್ಮೆ ವಿಪರೀತ ಹೀಟ್‌ನಿಂದ ಫೋನ್ ಬ್ಲಾಸ್ಟ್ ಕೂಡ ಆಗಬಹುದು. ಹಾಗಾಗಿ ಮೊಬೈಲ್ ಈ ರೀತಿ ಬಿಸಿಯಾಗಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಬೇಕು. ನಿಮ್ಮ ಫೋನ್ ಕೂಡ ಅತಿಯಾಗಿ ಬಿಸಿಯಾಗುತ್ತಿದ್ದರೆ ಈ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದನ್ನೂ ತಿಳಿದುಕೊಳ್ಳೋಣ.
ನಕಲಿ ಚಾರ್ಜರ್ ಬಳಕೆ – ನಕಲಿ ಚಾರ್ಜರ್ ಬಳಸಿ ಸ್ಮಾರ್ಟ್‌ಫೋನ್‌ಗಳನ್ನು ಎಂದಿಗೂ ಚಾರ್ಜ್ ಮಾಡಬಾರದು. ಯಾವಾಗಲೂ ಒರಿಜಿನಲ್ ಚಾರ್ಜರ್‌ಗಳನ್ನೇ ಬಳಸಿ. ನಕಲಿ ಚಾರ್ಜರ್ ಬಳಸುವುದರಿಂದಲೂ ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗುತ್ತದೆ.
ಫೋನ್‌ಗೆ ಬೇಕು ವಿಶ್ರಾಂತಿ – ನಿರಂತರವಾಗಿ ಫೋನ್ ಬಳಸುವುದರಿಂದ ಅದು ಬಿಸಿಯಾಗಬಹುದು. ಬೇಸಿಗೆಯಲ್ಲಿ ಫೋನ್ ತೀರಾ ಬಿಸಿಯಾದರೆ ಅದು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಅಗತ್ಯವಿಲ್ಲದೇ ಇದ್ದಾಗ ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸಬಹುದು.
ಸೆಟ್ಟಿಂಗ್‌ಗಳಲ್ಲಿ ಮಾಡಿ ಬದಲಾವಣೆ – ಸ್ಕ್ರೀನ್‌ನ ಬ್ರೈಟ್‌ನೆಸ್ ಅನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಇದರಿಂದ ಬ್ಯಾಟರಿ ಬಳಕೆ ಕಡಿಮೆಯಾಗುತ್ತದೆ. ಪರಿಣಾಮ ಫೋನ್ ಕೂಡ ಹೆಚ್ಚು ಬಿಸಿಯಾಗುವುದಿಲ್ಲ.
ಮೊಬೈಲ್ ಕವರ್ ಅಪಾಯಕಾರಿ – ಮೊಬೈಲ್ ಕವರ್ ನಮ್ಮ ಫೋನ್ ಅನ್ನು ಸುರಕ್ಷಿತವಾಗಿರಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಚಳಿಗಾಲದಲ್ಲಿ ಇದನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ ಬೇಸಿಗೆಯಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಬಳಸಿ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಫೋನ್ ಬಳಸುತ್ತಿರುವಾಗ ಕವರ್ ತೆಗೆದುಬಿಡಿ. ಏಕೆಂದರೆ ಕವರ್ ಇದ್ದರೆ ಫೋನ್ ಮತ್ತಷ್ಟು ಬಿಸಿಯಾಗುತ್ತದೆ.
ಶಾಖದಿಂದ ರಕ್ಷಿಸಿ: ಶಾಖದಿಂದ ತಪ್ಪಿಸಿಕೊಳ್ಳಲು ನಮಗೆ ನೆರಳು ಬೇಕು. ಅದೇ ರೀತಿ ಫೋನ್ ಕೂಡ ಬಯಸುವುದು ಇದನ್ನೇ. ನೇರ ಸೂರ್ಯನ ಬೆಳಕಿನಲ್ಲಿ ಫೋನ್ ಇಡಬೇಕು. ಏಕೆಂದರೆ ವಿಪರೀತ ಬಿಸಿಲಿನಲ್ಲಿ ಫೋನ್ ಬಿಸಿಯಾಗಬಹುದು. ಮನೆಯಲ್ಲಿ ಫೋನ್ ಅನ್ನು ಬಿಸಿಲು ಬೀಳುವ ಕಿಟಕಿ ಬಳಿ, ಕಂಬಳಿ ಅಡಿಯಲ್ಲಿ ಇಡಬೇಡಿ.