alex Certify ದೀರ್ಘಕಾಲ ಕೋವಿಡ್ ಸೋಂಕಿಗೊಳಗಾದವರ ಖಾಸಗಿ ಅಂಗದಲ್ಲಾಗ್ತಿದೆ ಈ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀರ್ಘಕಾಲ ಕೋವಿಡ್ ಸೋಂಕಿಗೊಳಗಾದವರ ಖಾಸಗಿ ಅಂಗದಲ್ಲಾಗ್ತಿದೆ ಈ ಬದಲಾವಣೆ

What is long Covid

ಕೊರೊನಾ ವೈರಸ್ ಹೊಸ ರೂಪಾಂತರ ವಿವಿಧ ರೀತಿಯ ಸಮಸ್ಯೆಯೊಡ್ಡಿದೆ. ಕೊರೊನಾ ಮೂರನೇ ಅಲೆ ವಿಶ್ವಾದ್ಯಂತದ ಪ್ರಾರಂಭವಾಗಿದೆ ಎಂದು ಡಬ್ಲ್ಯು ಎಚ್ ಒ ಎಚ್ಚರಿಸಿದೆ. ಈ ಮಧ್ಯೆ ದೀರ್ಘಕಾಲ ಕೋವಿಡ್ ಗೆ ಒಳಗಾದ ಜನರಲ್ಲಿ 200ಕ್ಕೂ ಹೆಚ್ಚು ಲಕ್ಷಣಗಳು ಕಾಣಿಸಿಕೊಂಡಿವೆ ಎಂಬ ವಿಷ್ಯವನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ.

ದೀರ್ಘ ಕೋವಿಡ್ ರೋಗಿಗಳ ಖಾಸಗಿ ಅಂಗದ ಗಾತ್ರ ಸಣ್ಣದಾಗ್ತಿದೆ, ಮೆನೋಪಾಸ್ ಮತ್ತು ಅಳಲು ಸಮಸ್ಯೆ ಸೇರಿದಂತೆ ಅನೇಕ ವಿಚಿತ್ರ ಲಕ್ಷಣಗಳು ಕಂಡುಬಂದಿವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಕೊರೊನಾ ರೋಗದ ನಂತ್ರವೂ ದೀರ್ಘಕಾಲದವರೆಗೆ ರೋಗ ಲಕ್ಷಣ ಕಾಡಿದೆ. ಕೆಲವರು ಒಂದು ತಿಂಗಳು ಸಮಸ್ಯೆ ಎದುರಿಸಿದ್ರೆ ಕೆಲವರಿಗೆ 6-7 ತಿಂಗಳು ಸಮಸ್ಯೆ ಕಾಡಿದೆ. ಇದನ್ನು ಲಾಂಗ್ ಕೋವಿಡ್ ಎಂದು ಕರೆಯಲಾಗಿದೆ.

ಲಂಡನ್ ಯೂನಿವರ್ಸಿಟಿ ನಡೆಸಿದ ಅಧ್ಯಯನದಲ್ಲಿ, ಲಾಂಗ್ ಕೋವಿಡ್ ರೋಗಿಗಳ ಮೆದುಳು, ಶ್ವಾಸಕೋಶ, ಚರ್ಮ ಸೇರಿದಂತೆ 10ಕ್ಕೂ ಹೆಚ್ಚು ಅಂಗಗಳಿಗೆ ಹಾನಿಯಾಗಿದೆ ಎಂಬುದು ಗೊತ್ತಾಗಿದೆ. ಇದಲ್ಲದೆ ಲಾಂಗ್ ಕೋವಿಡ್ ರೋಗಿಗಳಲ್ಲಿ ಲೈಂಗಿಕ ಅಪಸಾಮಾನ್ಯ ಕ್ರಿಯೆ, ತುರಿಕೆ, ಋತುಚಕ್ರದಲ್ಲಿ ಬದಲಾವಣೆ, ಹರ್ಪಿಸ್ ಮತ್ತು ಅತಿಸಾರದಂತಹ ಸಮಸ್ಯೆಗಳು ಕಂಡುಬರುತ್ತಿವೆ ಎಂದು ಸಂಶೋಧಕರು ಹೇಳಿದ್ದಾರೆ. ಕೊರೊನಾ ನಂತ್ರ ಕಾಡುವ ರೋಗಗಳಿಗೆ ಸರಿಯಾದ ಚಿಕಿತ್ಸೆ ಪಡೆಯುವ ಅಗತ್ಯವಿದೆ. ಕೊರೊನಾದಿಂದ ಬಳಲುವ ರೋಗಿಗಳಿಗೆ ಹೃದಯ,ಶ್ವಾಸಕೋಶ ಮಾತ್ರವಲ್ಲ ಇತರ ಅಂಗಗಳ ಪರೀಕ್ಷೆ ಮಾಡುವುದು ಅಗತ್ಯವೆಂದು ಸಂಶೋಧಕರು ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...