ಆಸ್ಟ್ರೇಲಿಯಾ ಕ್ರಿಸ್ಲ್ಯಾಂಡ್, ಹಚ್ಚ ಹಸಿರಿನ ಪ್ರಕೃತಿ ಮೈದಳೆದುಕೊಂಡು ನಿಂತ ಪ್ರದೇಶ. ಅಲ್ಲಿನ ಸ್ವಚ್ಚಂದ ಆಗಸದಲ್ಲಿ ಆಗಾಗ ಪುಟ್ಟ ಪುಟ್ಟ ವಿಮಾನಗಳು ಹಾರುತ್ತಲೇ ಇರುತ್ತೆ. ಆ ದಿನವೂ ಕೂಡಾ ಎಂದಿನಂತೆ ಲಫು ವಿಮಾವೊಂದು ಹಾರಾಡುತ್ತ ಇತ್ತ ಬಂದಿತ್ತು. ಆದರೆ ಕೆಲ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ತುರ್ತಾಗಿ ಲ್ಯಾಂಡ್ ಮಾಡಬೇಕಾಯಿತು. ಅದು ಲ್ಯಾಂಡ್ ಆಗಿರೋ ವಿಡಿಯೋವನ್ನ ಅಲ್ಲೇ ಇದ್ದವರು ತಮ್ಮ ಮೊಬೈಲ್ನಲ್ಲಿ ರಿಕಾರ್ಡ್ ಮಾಡಿಕೊಂಡಿದ್ದಾರೆ.
ಅಲ್ಲಿನ ಖಾಸಗಿ ಸುದ್ದಿವಾಹಿನಿ ಒಂದರ ಪ್ರಕಾರ, ವಿಕ್ ಪಿಸಾನಿ ಅನ್ನುವವರು ಈ ವಿಮಾನದ ಪೈಲಟ್ ಆಗಿದ್ದರು. ಒಬ್ಬರು ಮಾತ್ರ ಪಯಣಿಸುವಂತಹ ವಿಮಾನ ಇದಾಗಿದ್ದು, ಟೆಕ್ಆಫ್ ಆಗುವ ಮುನ್ನ ಈ ವಿಮಾನದಲ್ಲಿ ಯಾವುದೇ ದೋಷ ಕಾಣಿಸಿಕೊಂಡಿರಲಿಲ್ಲ. ಆದರೆ ಇಂಜಿನ್ ಫೇಲ್ ಆದ ತಕ್ಷಣ ಈ ಪ್ಲೇನ್ ಲ್ಯಾಂಡ್ ಮಾಡುವುದಕ್ಕೆ ಪೈಲೆಟ್ ಮುಂದಾಗಿದ್ದಾನೆ. ಪ್ಲೇನ್ ಏನೋ ಸೇಫ್ ಆಗಿ ಲ್ಯಾಂಡ್ ಆಯಿತು ಆದರೆ ತಲೆಕೆಳಗಾಗಿ ಲ್ಯಾಂಡ್ ಆಗಿತ್ತು. ಅದೃಷ್ಟವಶಾತ್ ಪೈಲೆಟ್‌ಗೆ ಏನೂ ಆಗಿರಲಿಲ್ಲ.
ತಲೆಕೆಳಗಾಗಿ ನಿಂತ ಪ್ಲೇನ್‌ನಿಂದ ಹೊರ ಬಂದ ಪೈಲೆಟ್ ಅಲ್ಲಿದ್ದವರ ಜೊತೆ ಫೋಟೋ ಕೂಡಾ ತೆಗೆಸಿಕೊಂಡಿದ್ದಾರೆ. ಕೊನೆಗೆ ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ವಿಮಾನ ಲ್ಯಾಂಡ್ ಆಗುವುದನ್ನ ನೋಡ್ತಿದ್ದರೆ ಇದು ಯಾವುದಾದರೂ ಮನೆಯ ಮೇಲೆ ಲ್ಯಾಂಡ್ ಆಗಲಿದೆಯೋ ಏನೋ ಅಂತ ಅನಿಸಿತ್ತು. ಆದರೆ ಪೈಲೆಟ್ ಮುನ್ನೆಚ್ಚರಿಕೆ ಫಲವಾಗಿ ಅಲ್ಲಿನ ಬಯಲು ಪ್ರದೇಶದಲ್ಲಿ ವಿಮಾನ ಲ್ಯಾಂಡ್ ಆಗಿದೆ. ಇದೆಲ್ಲವನ್ನೂ ಅಲ್ಲಿನ ಸ್ಥಳೀಯರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಈ ವಿಡಿಯೋ ನೋಡಿರೋ ನೆಟ್ಟಿಗರು, ಇಷ್ಟು ದೊಡ್ಡ ಅವಘಡ ಆದರೂ ಪೈಲೆಟ್‌ಗೆ ಏನೂ ಆಗಿಲ್ಲ ಅಂತ ನಿಟ್ಟುಸಿರು ಬಿಟ್ಟಿದ್ದಾರೆ. ಪೈಲೆಟ್ ಲ್ಯಾಂಡ್ ಮಾಡುವ ವಿಧಾನಕ್ಕೆ ಭೇಷ್ ಅಂತಿದ್ದಾರೆ.
‘ಪೈಲೆಟ್‌ಗೂ ಕೂಡಾ ಈ ಪ್ರದೇಶದಲ್ಲಿ ಎಮರ್ಜೆನ್ಸಿ ಲ್ಯಾಂಡ್ ಮಾಡುವುದು ಸವಾಲಿನ ಕೆಲಸವಾಗಿತ್ತು. ನನ್ನ 30 ವರ್ಷದ ಅನುಭವದಲ್ಲಿ ಇಂತಹದ್ದೊಂದು ಸನ್ನಿವೇಶವನ್ನ ನಾನು ಯಾವತ್ತೂ ಎದುರಿಸಿರಲಿಲ್ಲ. ಹತ್ತಿರದಲ್ಲೇ ಈ ವಿಮಾನ ಲ್ಯಾಂಡ್ ಮಾಡುವುದಕ್ಕೆ ಎಲ್ಲಿಯೂ ಸೂಕ್ತವಾದ ಸ್ಥಳವಿರಲಿಲ್ಲ. ತಕ್ಷಣವೇ ಲ್ಯಾಂಡ್ ಮಾಡುವ ಅನಿವಾರ್ಯತೆ ಇತ್ತು. ಏನಾದರೂ ಮಾಡೋಣ ಅಂದರೆ ಆಗಲೇ ಪ್ಲೇನ್ ಭೂಮಿ ಸ್ಪರ್ಶಿಸುವ ಹಂತದಲ್ಲಿತ್ತು. ಅದರಲ್ಲೂ ಸುತ್ತಲೂ ಮರಗಿಡಗಳು ಇರುವುದರಿಂದ ಈ ಪ್ಲೇನ್ ಲ್ಯಾಂಡ್ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಇದರ ಪರಿಣಾಮ ಏನಾಗಿದೆ ಅನ್ನೋದು ಎಲ್ಲರ ಮುಂದಿದೆ ಎಂದಿದ್ದಾರೆ.