alex Certify ಸಣ್ಣ ಬ್ಯಾಂಕ್, ದೊಡ್ಡ ಆದಾಯ: ಎಫ್‌ಡಿ ಮೇಲೆ ಶೇ.9ಕ್ಕಿಂತಲೂ ಅಧಿಕ ಬಡ್ಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಣ್ಣ ಬ್ಯಾಂಕ್, ದೊಡ್ಡ ಆದಾಯ: ಎಫ್‌ಡಿ ಮೇಲೆ ಶೇ.9ಕ್ಕಿಂತಲೂ ಅಧಿಕ ಬಡ್ಡಿ

ಕಷ್ಟಪಟ್ಟು ದುಡಿದ ಹಣವನ್ನು ಆದಷ್ಟು ಉಳಿತಾಯ ಮಾಡಬೇಕು ಅನ್ನೋದು ಪ್ರತಿಯೊಬ್ಬರ ಉದ್ದೇಶ. ಹಣವನ್ನು ಉಳಿತಾಯ ಮಾಡಲು ಸಾಕಷ್ಟು ಮಾರ್ಗಗಳಿವೆ. ಆದರೆ ಖಾತರಿಯ ಆದಾಯದೊಂದಿಗೆ ಸುರಕ್ಷಿತ ಹೂಡಿಕೆಗಾಗಿ ಜನರು ಫಿಕ್ಸೆಡ್‌ ಡೆಪಾಸಿಟ್‌ ಅನ್ನು ಆಯ್ಕೆ ಮಾಡಿಕೊಳ್ತಾರೆ. ಎಫ್‌ಡಿಯಲ್ಲಿ ಉತ್ತಮ ಆದಾಯ ಬರಬೇಕೆಂದರೆ ಬಂಪರ್ ಬಡ್ಡಿ ದರಗಳನ್ನು ನೀಡುವ ಬ್ಯಾಂಕ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು.

ಸುರಕ್ಷಿತ ಹೂಡಿಕೆ

ಫಿಕ್ಸೆಡ್ ಡೆಪಾಸಿಟ್ ಅತ್ಯಂತ ಸುರಕ್ಷಿತ ಮತ್ತು ಜನಪ್ರಿಯ ವಿಧಾನವಾಗಿದೆ. ಇದರಲ್ಲಿ ಆದಾಯ ಖಾತರಿಯೂ ಇರುತ್ತದೆ. ಗ್ರಾಹಕರನ್ನು ಆಕರ್ಷಿಸಲು ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFC ಗಳು) ಬಂಪರ್ ಬಡ್ಡಿ ದರಗಳನ್ನು ನೀಡುತ್ತವೆ. ಅಂತಹ ಐದು ಎನ್‌ಬಿಎಫ್‌ಸಿಗಳ ಬಗ್ಗೆ ತಿಳಿಯೋಣ. ಇವುಗಳಲ್ಲಿ ಫಿಕ್ಸೆಡ್‌ ಡೆಪಾಸಿಟ್‌ ಮೇಲೆ ಶೇ.9.6 ರವರೆಗಿನ ಬಡ್ಡಿ ದರಗಳು ಲಭ್ಯವಿದೆ.

ಸೂರ್ಯೋದಯ ಸಣ್ಣ ಹಣಕಾಸು ಬ್ಯಾಂಕ್

ಎಫ್‌ಡಿಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿರುವವರಿಗೆ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಉತ್ತಮ ಆಯ್ಕೆಯಾಗಿದೆ. ಸೂರ್ಯೋದಲ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ FD ಮೇಲೆ ಬಂಪರ್ ರಿಟರ್ನ್ಸ್ ನೀಡುತ್ತಿದೆ. ಈ ಬ್ಯಾಂಕ್ ಗ್ರಾಹಕರಿಗೆ FD ಮೇಲೆ ಶೇ.9.60 ರಷ್ಟು ಬಡ್ಡಿಯನ್ನು ನೀಡುತ್ತಿದೆ. 5 ವರ್ಷಗಳವರೆಗೆ ಇಲ್ಲಿ ಎಫ್‌ಡಿ ಇಟ್ಟರೆ ಹಿರಿಯ ನಾಗರಿಕರಿಗೆ ಶೇ.9.10 ರಿಂದ ಶೇ.9.60 ರವರೆಗೆ ಬಡ್ಡಿ ಸಿಗುತ್ತದೆ.

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ 1001 ದಿನಗಳ ಎಫ್‌ಡಿಯಲ್ಲಿ ಸಾಮಾನ್ಯ ನಾಗರಿಕರಿಗೆ 9 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ 9.50 ಪ್ರತಿಶತದವರೆಗೆ ಬಡ್ಡಿಯನ್ನು ನೀಡುತ್ತದೆ.

ಫಿನ್‌ಕೇರ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌

ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ಸಹ ಇಂಥದ್ದೇ ಕೊಡುಗೆ ಇದೆ. 1000 ದಿನಗಳ ಎಫ್‌ಡಿ ಮೇಲೆ ಶೇ.8.51 ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರು ಈ ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿದರೆ ಅವರಿಗೆ ಶೇ.9.11ರಷ್ಟು ಬಡ್ಡಿ ಸಿಗುತ್ತದೆ.

ಈಕ್ವಿಟಾಸ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌

ಈ ಸಣ್ಣ ಹಣಕಾಸು ಬ್ಯಾಂಕ್‌ನಲ್ಲಿ ಸಾಮಾನ್ಯ ಜನರು 888 ದಿನಗಳ ಎಫ್‌ಡಿ ಇಟ್ಟರೆ ಶೇ.8.50ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರು ಅದೇ ಅವಧಿಗೆ ಶೇಕಡಾ 9 ರವರೆಗೆ ಬಡ್ಡಿಯನ್ನು ಪಡೆಯುತ್ತಾರೆ.

ESAF ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌  

ಇಲ್ಲಿ ಸಹ ಫಿಕ್ಸೆಡ್‌ ಡೆಪಾಸಿಟ್‌ ಮೇಲೆ ಆಕರ್ಷಕ ಬಡ್ಡಿದರವಿದೆ. ಈ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡುವ ಗ್ರಾಹಕರು 3 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿ ಮೇಲೆ 8.50 ಪ್ರತಿಶತ ಬಡ್ಡಿಯನ್ನು ಪಡೆಯುತ್ತಾರೆ. ಹಿರಿಯ ನಾಗರಿಕರಿಗೆ 9 ಪ್ರತಿಶತ ಬಡ್ಡಿ ಸಿಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...