ಮಕ್ಕಳನ್ನು ಸರಿದಾರಿಗೆ ತರಲು ಪಾಲಕರು ಮಕ್ಕಳನ್ನು ಹೊಡೆಯುತ್ತಾರೆ. ಆದ್ರೆ ಇನ್ಮುಂದೆ ಮಕ್ಕಳಿಗೆ ಹೊಡೆಯುವಂತಿಲ್ಲ. ಒಂದು ವೇಳೆ ಮಕ್ಕಳಿಗೆ ಕಪಾಳಮೋಕ್ಷ ಮಾಡಿದ್ರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹೌದು, ವೇಲ್ಸ್ ನಲ್ಲಿ ಹೊಸ ಕಾನೂನು ಜಾರಿಗೆ ಬಂದಿದೆ. ವೇಲ್ಸ್ ನಲ್ಲಿ ವಾಸಿಸುವವರು ಮಾತ್ರವಲ್ಲದೆ ಅಲ್ಲಿಗೆ ಬರುವವರು ಕೂಡ ಈ ನಿಯಮ ಪಾಲನೆ ಮಾಡಬೇಕಾಗುತ್ತದೆ.
ವಯಸ್ಕರಂತೆ ಮಕ್ಕಳ ರಕ್ಷಣೆಗೆ ಕಾನೂನು ಬೇಕು ಎಂಬ ಕಾರಣಕ್ಕೆ ವೇಲ್ಸ್ ನಲ್ಲಿಯೂ ಮಕ್ಕಳ ಮೇಲಿನ ಹಲ್ಲೆ ವಿರುದ್ಧ ಕಾನೂನು ರಚನೆ ಮಾಡಲಾಗಿದೆ. ಈ ಕಾನೂನು ಜಾರಿಗೆ ತಂದ 60 ದೇಶಗಳಲ್ಲಿ ವೇಲ್ಸ್ ಒಂದಾಗಿದೆ. ಮೊದಲ ಬಾರಿ 1979 ರಲ್ಲಿ ಸ್ವೀಡನ್‌ನಲ್ಲಿ ಮಕ್ಕಳಿಗಾಗಿ ಇಂತಹ ಕಾನೂನನ್ನು ಜಾರಿಗೆ ತರಲಾಯಿತು.ಅಮೆರಿಕ ಮತ್ತು ಆಫ್ರಿಕಾ ಮತ್ತು ಏಷ್ಯಾದ ಹಲವು ದೇಶಗಳಲ್ಲಿ ದೈಹಿಕ ಶಿಕ್ಷೆಯ ವಿರುದ್ಧ ಯಾವುದೇ ಕಾನೂನಿಲ್ಲ.
ವೇಲ್ಸ್ ನಲ್ಲಿ ಜಾರಿಗೆ ಬಂದ ಕಾನೂನಿನಲ್ಲಿ ಕೆಲ ರಿಯಾಯಿತಿ ನೀಡಲಾಗಿದೆ. ಮಗುವನ್ನು ಶಿಕ್ಷಿಸುವಾಗ ವಯಸ್ಸು, ಹೊಡೆಯುವ ವಿಧಾನ ಮತ್ತು ದೇಹದ ಮೇಲಾಗುವ ಗಾಯವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ನವೆಂಬರ್ 2020 ರಲ್ಲಿ ಸ್ಕಾಟ್ಲೆಂಡ್ ನಲ್ಲಿ ಕಾನೂನು ಜಾರಿಗೆ ತರಲಾಗಿದೆ. ಮಕ್ಕಳ ಮೇಲೆ ದೈಹಿಕ ಶಿಕ್ಷೆಯನ್ನು ಅಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಂಗ್ಲೆಂಡ್ ನಲ್ಲಿ ಮಕ್ಕಳಿಗೆ ಪೋಷಕರು ಹೊಡೆಯಬಹುದು. ಆದ್ರೆ ಊತ, ಗಾಯವಾದ್ರೆ ಶಿಕ್ಷೆ ಅನುಭವಿಸಬೇಕಾಗುತ್ತದೆ.