alex Certify ಶಿವಮೊಗ್ಗದಲ್ಲಿ ನಡೆದ ಎಸ್.ಎಂ. ಕೃಷ್ಣ ಮದುವೆ ಆಹ್ವಾನ ಪತ್ರಿಕೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗದಲ್ಲಿ ನಡೆದ ಎಸ್.ಎಂ. ಕೃಷ್ಣ ಮದುವೆ ಆಹ್ವಾನ ಪತ್ರಿಕೆ ವೈರಲ್

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನಕ್ಕೆ ರಾಜ್ಯವೇ ಕಂಬನಿ ಮಿಡಿದಿದೆ. ಎಸ್.ಎಂ. ಕೃಷ್ಣ ಅವರ ಪತ್ನಿಯ ತವರು ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಎಸ್.ಎಂ. ಕೃಷ್ಣ ಅವರ ಪತ್ನಿ ಪ್ರೇಮಾ ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಗ್ರಾಮದವರು. ಪ್ರಮುಖ ಅಡಿಕೆ ಬೆಳೆಗಾರ ಚಿನ್ನಪ್ಪಗೌಡ ಮತ್ತು ಕಮಲಾಕ್ಷಮ್ಮ ದಂಪತಿಯ ಪುತ್ರಿ ಪ್ರೇಮಾ –ಎಸ್.ಎಂ ಕೃಷ್ಣ ಅವರ ವಿವಾಹ 1966 ರಲ್ಲಿ ನೆರವೇರಿತು.

ಆ ವೇಳೆಗಾಗಲೇ ಎಸ್.ಎಂ. ಕೃಷ್ಣ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಮಂಡ್ಯ ಜಿಲ್ಲೆ ಮದ್ದೂರು ಕ್ಷೇತ್ರದ ಶಾಸಕರಾಗಿದ್ದರು. ಇವರ ಕುಟುಂಬಗಳನ್ನು ಒಂದುಗೂಡಿಸಿದ್ದು ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ.

ಪ್ರೇಮಾ ಮತ್ತು ಎಸ್.ಎಂ. ಕೃಷ್ಣ ಅವರಿಗೆ ಸಂಬಂಧಿಯಾಗಿದ್ದ ಕಡಿದಾಳ್ ಮಂಜಪ್ಪ ಸಂಬಂಧ ಬೆಸೆದಿದ್ದರು. ಕಡಿದಾಳ್ ಮಂಜಪ್ಪ ಅವರ ಪತ್ನಿ ಲಕ್ಷ್ಮಿದೇವಿ ಸಹೋದರ ಪ್ರೇಮಾ ಅವರ ಸಹೋದರಿಯನ್ನು ಮದುವೆಯಾಗಿದ್ದರು.  ಪ್ರೇಮಾ ಅವರಿಗೆ ಕಡಿದಾಳು ಮಂಜಪ್ಪ ಸಂಬಂಧಿಯಾಗಿದ್ದರು. ಸಂಬಂಧಿ ಎಸ್.ಎಂ. ಕೃಷ್ಣ ಅವರಿಗೆ ಹೆಣ್ಣು ಹುಡುಕುತ್ತಿರುವ ವಿಚಾರ ತಿಳಿದು ಮಂಜಪ್ಪ ಅವರೇ ಪ್ರೇಮಾ ಅವರ ವಿಷಯ ತಿಳಿಸಿದ್ದರು.

ಇವರ ಮದುವೆ ಶಿವಮೊಗ್ಗದ ಶಿವಮೊಗ್ಗದ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ 1966ರ ಏಪ್ರಿಲ್ 29ರಂದು ನೆರವೇರಿತ್ತು. ಇದೀಗ ಕೃಷ್ಣ ನಿಧನರಾದ ನಂತರ ಜಾಲತಾಣದಲ್ಲಿ ಮದುವೆ ಆಹ್ವಾನ ಪತ್ರಿಕೆ ವೈರಲ್ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...