ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಧುನಿಕ ಬೆಂಗಳೂರು ನಿರ್ಮಾಣಕ್ಕೆ ಅನೇಕ ಯೋಜನೆ ರೂಪಿಸಿದ್ದಾರೆ. ವಿಕಾಸಸೌಧ ನಿರ್ಮಾಣ, ಫ್ಲೈಓವರ್ ಗಳು, ಮೆಟ್ರೋ, ಐಟಿ ಬಿಟಿ ವಲಯಕ್ಕೆ ಉತ್ತೇಜನ ಹೀಗೆ ಹಲವು ಜಾರಿಗೊಳಿಸಿದ ಯೋಜನೆ ಹಲವಾರು.
ಬೆಂಗಳೂರನ್ನು ಅಂತರರಾಷ್ಟ್ರೀಯ ಮಾರುಕಟ್ಟೆ ಮಾಡಿದವರು ಎಸ್.ಎಂ. ಕೃಷ್ಣ. ಅವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಬಜೆಟ್ 13,000 ಕೋಟಿ ರೂಪಾಯಿ ಇತ್ತು. ಅಧಿಕಾರದಿಂದ ಇಳಿಯುವಾಗ 34,000 ಕೋಟಿ ರೂಪಾಯಿಗೆ ತಲುಪಿತ್ತು. ದೇವನಹಳ್ಳಿಯಲ್ಲಿ ಏರ್ಪೋರ್ಟ್ ನಿರ್ಮಾಣಕ್ಕೆ ಅವರು ಕಾರಣರಾಗಿದ್ದಾರೆ.
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತಂದ ಎಸ್.ಎಂ. ಕೃಷ್ಣ ಅವರು ಮರಳಿ ಮಕ್ಕಳು ಶಾಲೆಗೆ ಬರುವಂತೆ ಮಾಡಿದ್ದರು. ಯಶಸ್ವಿನಿ ಯೋಜನೆಯ ಮೂಲಕ ರೈತಾಪಿ ವರ್ಗದವರಿಗೆ ಚಿಕಿತ್ಸೆ ಸೌಲಭ್ಯ ಕಲ್ಪಿಸಿದ್ದರು. ಅವರು ಮುಖ್ಯಮಂತ್ರಿ ಆಗಿದ್ದಾಗ ನೀರಾವರಿ ಸೇರಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.