ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಮಾಲೀಕತ್ವದ ಕೊಳಗೇರಿ ಪ್ರದೇಶಗಳನ್ನು ಈಗಾಗಲೇ ಹಸ್ತಾಂತರ ಪಡೆದು ಹಕ್ಕು ಪತ್ರ ವಿತರಿಸಿರುವ ನಿವಾಸಿಗಳಿಗೆ ಮನೆಗಳಿಗೆ ನೋಂದಾಯಿಸಿಕೊಡಲಾಗುವುದು.
ನೋಂದಾಯಿಸಲು ಇ-ಖಾತೆ ಬೇಕಾಗಿರುವುದರಿಂದ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಇ-ಖಾತೆ ಪಡೆಯಲು ಮಹಾನಗರ ಪಾಲಿಕೆ ಆಯುಕ್ತರು, ನಗರಸಭೆಯ ಪೌರಾಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಈಗಾಗಲೇ ಉಪ-ವಿಭಾಗದ ಅಧೀನದಲ್ಲಿ ಅಥವಾ ಅವರ ಗಮನದಲ್ಲಿ ಇಲ್ಲದೇ ಪಡೆದಿರುವ ಹಕ್ಕು ಪತ್ರಗಳನ್ನು ಮೇಲಾಧಿಕಾರಿಗಳ ಆದೇಶದಂತೆ ರದ್ದು ಮಾಡಲಾಗಿದೆ. ನಗರ ಸ್ಥಳೀಯ-ಸಂಸ್ಥೆಗಳಿಂದ ಇ-ಖಾತೆ ಪಡೆದ ನಂತರ ನೋಂದಾಯಿಸಿಕೊಡಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಬಳ್ಳಾರಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.