ಕೋವಿಡ್ -19 ಸಾಂಕ್ರಾಮಿಕವು ದೇಶಾದ್ಯಂತ ತಗ್ಗಿದಂತೆ ಕಾಣಿಸಿದ್ದರೂ ಸಹ ಕೇರಳ ಸೇರಿ ಕೆಲವು ರಾಜ್ಯಗಳಲ್ಲಿ ಪ್ರಕರಣ ಹೆಚ್ಚಾಗಿರುವುದು ಕಂಡುಬಂದಿದೆ.
ಅದೇ ರೀತಿ ಮಹಾರಾಷ್ಟ್ರದಲ್ಲಿ ಸತತ ನಾಲ್ಕನೇ ವಾರವೂ ಸೋಂಕಿತರ ಸಂಖ್ಯೆ ಒಂದಷ್ಟು ಇಳಿಮುಖವಾಗುವ ಲಕ್ಷಣ ಕಾಣಿಸಿದೆ.
ಶುಕ್ರವಾರ ದೇಶದಾದ್ಯಂತ ಒಟ್ಟು 42,719 ಪ್ರಕರಣ ದಾಖಲಾಗಿದ್ದು ಕಳೆದ ಮೂರು ದಿನದಿಂದ ಇಳಿಕೆ ಹಾದಿಯಲ್ಲಿ ಕಾಣಿಸಿದೆ. ಒಟ್ಟಾರೆ ಕಳೆದ ಒಂದು ವಾರದಲ್ಲಿ ಎರಡು ಲಕ್ಷಕ್ಕೂ ಅಧಿಕ ಹೊಸ ಪ್ರಕರಣ ದಾಖಲಾಗಿದೆ. ಕಳೆದ ವಾರದ ಮೊದಲ ಐದು ದಿನಕ್ಕೆ ಹೋಲಿಸಿದರೆ (2,22,444) ಹೊಸ ಪ್ರಕರಣಗಳಲ್ಲಿ ಶೇ.5.6ರಷ್ಟು ಕಡಿಮೆಯಾಗಿದೆ, ಇದು ಗಮನಾರ್ಹವಾಗಿ ಕಡಿಮೆಯಾಗಿದೆ.
ಶುಕ್ರವಾರ ಕೇರಳದಲ್ಲಿ 13,563 ಹೊಸ ಪ್ರಕರಣಗಳು ದಾಖಲಾಗಿವೆ, ಆದರೆ ಅದು ಕಳೆದ ಶುಕ್ರವಾರಕ್ಕಿಂತ ಹೆಚ್ಚಾಗಿದೆ. ಈ ವಾರದಲ್ಲಿ ಇಲ್ಲಿಯವರೆಗೆ ಕೇರಳದಲ್ಲಿ 65,345 ಪ್ರಕರಣಗಳು ದಾಖಲಾಗಿವೆ, ಇದು ಕಳೆದ ವಾರಕ್ಕೆ ಹೋಲಿಸಿದರೆ ಹೆಚ್ಚಾದಂತೆ ಕಾಣಿಸಿದೆ.
ಮಹಾರಾಷ್ಟ್ರದಲ್ಲಿ 8,992 ಹೊಸ ಪ್ರಕರಣ ವರದಿಯಾಗಿದೆ. ಈ ವಾರದಲ್ಲಿ ಇಲ್ಲಿಯವರೆಗೆ 42,822 ಪ್ರಕರಣ ದಾಖಲಾಗಿದೆ.
ಮಣಿಪುರ, ಅರುಣಾಚಲಪ್ರದೇಶ, ತ್ರಿಪುರಾ, ಮೇಘಾಲಯಗಳಲ್ಲಿ ಸೋಂಕು ಹೆಚ್ಚುತ್ತಿವೆ.