alex Certify ಕಿರಿಯ ವಯಸ್ಕರನ್ನೆ ಬಾಧಿಸುತ್ತಿದೆ ಒಮಿಕ್ರಾನ್ ಚಾಲಿತ ಕೋವಿಡ್ ವೇವ್; ಐಸಿಎಂಆರ್ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿರಿಯ ವಯಸ್ಕರನ್ನೆ ಬಾಧಿಸುತ್ತಿದೆ ಒಮಿಕ್ರಾನ್ ಚಾಲಿತ ಕೋವಿಡ್ ವೇವ್; ಐಸಿಎಂಆರ್ ಮಹತ್ವದ ಮಾಹಿತಿ

ಈ ಬಾರಿಯ ಕೋವಿಡ್ 44ವರ್ಷ ಅಥವಾ ಅದಕ್ಕಿಂತ ಕಿರಿಯ ವಯಸ್ಕರಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ಐಸಿಎಂಆರ್ ವರದಿ ಮಾಡಿದೆ. ಜೊತೆಗೆ ಈ ಬಾರಿ ಚಿಕಿತ್ಸೆಗಾಗಿ ಔಷಧಿಗಳ ಬಳಕೆಯು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ತಿಳಿಸಿದೆ.

ಸಾಪ್ತಾಹಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಐಸಿಎಂಆರ್ ಡಿಜಿ ಬಲರಾಮ್ ಭಾರ್ಗವ ಅವರು ಈ ಕೋವಿಡ್ ಅಲೆಯಲ್ಲಿ, ರೋಗಿಗಳಲ್ಲಿ ಗಂಟಲು ನೋವು ಹೆಚ್ಚಾಗಿ ಕಂಡು ಬಂದಿದೆ. ಹಿಂದಿನ ಅಲೆಗೆ ಹೋಲಿಸಿದರೆ, ಸರಾಸರಿ 44 ವರ್ಷ ವಯಸ್ಸಿಗಿಂತ ಸ್ವಲ್ಪ ಕಿರಿಯ ಜನಸಂಖ್ಯೆಯು ಈ ಅಲೆಯಲ್ಲಿ ಹೆಚ್ಚು ಸೋಂಕಿಗೆ ಒಳಗಾಗಿದೆ ಎಂದು ಹೇಳಿದ್ದಾರೆ. ಹಿಂದಿನ ಅಲೆಗಳಲ್ಲಿ, ಸೋಂಕಿತ ಜನಸಂಖ್ಯೆಯ ವಿಭಾಗದ ಸರಾಸರಿ ವಯಸ್ಸು 55 ವರ್ಷಗಳು ಎಂದು ತಿಳಿಸಿದ್ದಾರೆ.

ಕರಾವಳಿ To ಕುಂದಾನಗರಿ; ಬೆಳಗಾವಿ ಕಾಲೇಜಿಗೂ ವ್ಯಾಪಿಸಿದ ಹಿಜಾಬ್ ವಿವಾದ

ದೇಶಾದ್ಯಂತ ಸುಮಾರು 37 ಆಸ್ಪತ್ರೆಗಳಿಂದ ಸಂಗ್ರಹಿಸಿರುವ ಅಂಕಿ-ಅಂಶಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ, ಒಮಿಕ್ರಾನ್​​ ಸೋಂಕಿನಿಂದ ಉಂಟಾಗಿರುವ ಕೊವಿಡ್​ 19 ಮೂರನೇ ಅಲೆ (Covid 19 3rd Wave) ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಜನರು ಅಂದರೆ ಕಿರಿಯ ವಯಸ್ಸಿನವರಿಗೇ ಬಾಧಿಸುತ್ತಿದೆ ಎಂಬುದು ಬಹಿರಂಗಗೊಂಡಿದೆ.

ಆಸ್ಪತ್ರೆಗಳಲ್ಲಿ ಲಭ್ಯವಾದ 2021 ಡಿಸೆಂಬರ್ 16 ಮತ್ತು 2022 ಜನವರಿ 17 ರ ನಡುವಿನ ಡೇಟಾವನ್ನು 2021 ರ ನವೆಂಬರ್ 15 ಮತ್ತು ಡಿಸೆಂಬರ್ 15ರ ಡೇಟಾಕ್ಕೆ ಹೋಲಿಸಿ ಸಮೀಕ್ಷೆ ನಡೆಸಿದಾಗ, ಈ ಬಾರಿ ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ಮೂರನೇ ತರಂಗದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸರಾಸರಿ ವಯಸ್ಸು ಅಂದಾಜು 44 ಆಗಿತ್ತು. ಅದು ಹಿಂದಿನ ಅಲೆಯಲ್ಲಿ ಅಂದಾಜು 55 ಆಗಿತ್ತು ಎಂದು ಹೇಳಲಾಗಿದೆ. ಇನ್ನು ಸಾವಿನ ರೇಟ್ ಬಗ್ಗೆಯೂ ಮಾಹಿತಿ ನೀಡಲಾಗಿದ್ದು, ವ್ಯಾಕ್ಸಿನ್ ಪಡೆದ ಜನಸಂಖ್ಯೆಯಲ್ಲಿ 10%, ವ್ಯಾಕ್ಸಿನ್ ಪಡೆಯದವರಲ್ಲಿ 20%ಸಾವು ವರದಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...