ಕೆಲವರು ಮಲಗುವಾಗ ದಿಂಬು ಇಲ್ಲದಿದ್ದರೆ ತಮಗೆ ನಿದ್ದೆಯೇ ಬರುವುದಿಲ್ಲ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ದಿಂಬು ಇಟ್ಟುಕೊಂಡು ನಿದ್ರಿಸುವುದು ಆರೋಗ್ಯಕ್ಕೆ ಒಳ್ಳೆಯದೇ?
ಗಟ್ಟಿಯಾದ ಹಾಗೂ ಎತ್ತರದ ತಲೆದಿಂಬು ಇಟ್ಟುಕೊಂಡು ಮಲಗಿದರೆ ನಿಮ್ಮ ಬೆನ್ನುಹುರಿಗೆ ಸಮಸ್ಯೆಯಾದೀತು. ಇದರಿಂದ ನಿಮ್ಮ ಬೆನ್ನುಮೂಳೆ ವಕ್ರವಾಗುತ್ತದೆ. ಹಾಗಾಗಿ ತಲೆದಿಂಬಿನಿಂದ ದೂರವಿರಿ.
ಕುತ್ತಿಗೆಯಲ್ಲಿ ನೋವು ಸೆಳೆತ ಕಾಣಿಸಿಕೊಳ್ಳುವುದಕ್ಕೂ ನೀವು ಬಳಸುವ ತಲೆದಿಂಬೇ ಕಾರಣವಿರಬಹುದು. ಹಾಗಾಗಿ ಮಲಗುವಾಗ ಅದನ್ನು ದೂರತಳ್ಳಿ. ರಕ್ತಚಲನೆ ಸರಾಗವಾಗಿ ನಡೆಯಲು ಅವಕಾಶ ಕಲ್ಪಿಸಿಕೊಡಿ.
ದಿಂಬಿನ ಮೇಲೆ ಮಲಗುವಾಗ ಮುಖ ನೇರವಾಗಿ ದಿಂಬನ್ನು ಒತ್ತುವುದರಿಂದ ಸುಕ್ಕುಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಇದು ನಿಮ್ಮ ಮುಖವನ್ನು ವಯಸ್ಸಾದವರಂತೆ ಕಾಣಿಸಬಹುದು. ಮಕ್ಕಳು ದಿಂಬು ಬಳಸಿದರೆ ಉಸಿರಾಟಕ್ಕೂ ತೊಂದರೆಯಾಗಬಹುದು.