ಪ್ರತಿದಿನ ನಿದ್ರೆ ಅತ್ಯಗತ್ಯ. ಉತ್ತಮ ನಿದ್ರೆ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಉತ್ತಮ ನಿದ್ದೆಗಾಗಿ ಮಲಗುವ ವಿಧಾನ ಬಹಳ ಮುಖ್ಯ. ದಿನ ನಿತ್ಯದ ಕೆಲಸ ಹಾಗೂ ಆಯಾಸ ನಿದ್ರೆ ಮಾಡಿದ್ರೆ ಕಡಿಮೆಯಾಗುತ್ತದೆ. ಆಯಾಸ ಎಷ್ಟೇ ಇದ್ದರೂ ಕೆಲವರಿಗೆ ನಿದ್ರೆ ಸರಿಯಾಗಿ ಬರುವುದಿಲ್ಲ. ಯಾವಾಗ ಹಾಗೂ ಹೇಗೆ ಮಲಗಬೇಕು ಎನ್ನುವುದನ್ನು ತಿಳಿದಿರಬೇಕು.
ಭಾರತೀಯ ಪುರಾತನ ವೈದ್ಯ ಪದ್ಧತಿ ಪ್ರಕಾರ ಮಲಗುವಾಗ ಎಡಗಡೆ ಮಗ್ಗಲಿನಲ್ಲಿ ಮಲಗಬೇಕು. ಇದರಿಂದ ಬಹಳಷ್ಟು ಪ್ರಯೋಜನಗಳಿವೆ.
ಗ್ಯಾಸ್ ಸಮಸ್ಯೆ ಮತ್ತು ಹೊಟ್ಟೆ ಉರಿ ಇದ್ದರೆ ಎಡಬದಿಯಲ್ಲಿ ಮಲಗುವುದರಿಂದ ಸಮಸ್ಯೆ ಕಡಿಮೆ ಆಗುತ್ತದೆ.ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಜೊತೆಗೆ ಗೊರಕೆಯ ಸಮಸ್ಯೆಗಳು ಕಡಿಮೆಯಾಗುತ್ತದೆ. ಎಡಬದಿ ಮಗ್ಗುಲಿನಲ್ಲಿ ಮಲಗಿದ್ರೆ ಗೊರಕೆ ಕಡಿಮೆಯಾಗುತ್ತದೆ.
ಎಡಭಾಗಕ್ಕೆ ತಿರುಗಿ ಮಲಗುವುದರಿಂದ ದೇಹದ ಪಚನಕ್ರಿಯೆ ಸರಿಯಾಗಿ ನಡೆಯುತ್ತದೆ. ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಇದರಿಂದಾಗಿ ಎದೆಯುರಿ ಮತ್ತು ಗ್ಯಾಸ್, ಆ್ಯಸಿಡಿಟಿಯಂತಹ ಸಮಸ್ಯೆಗಳು ಕಡಿಮೆಯಾಗುತ್ತದೆ.
ಮೂತ್ರಪಿಂಡ ಮತ್ತು ಯಕೃತ್ತು ದೇಹದ ಪ್ರಮುಖ ಅಂಗಗಳಾಗಿದ್ದು ಇವುಗಳ ಕಾರ್ಯಕ್ಷಮತೆ ಹೆಚ್ಚಿಸಲು ಇದು ಸರಳ ವಿಧಾನ. ಹೃದಯಕ್ಕೆ ಸುಲಭವಾಗಿ ರಕ್ತ ಸಂಚಾರವಾಗಲು ಎಡಗಡೆ ಮಗ್ಗಲು ಮಾಡಿ ಮಲಗಬೇಕು. ಗರ್ಭಿಣಿ ಸ್ತ್ರೀಯರಿಗೆ ಸಹ ಎಡಗಡೆ ಮಲಗಲು ಸಲಹೆ ನೀಡಲಾಗುತ್ತದೆ.