ಯಾರದಾದ್ರೂ ಜೊತೆಯಲ್ಲಿ ಮಲಗುವುದಿರಂದ ಒತ್ತಡ ಕಡಿಮೆಯಾಗುತ್ತದೆ ಅನ್ನೋದು ದೃಢಪಟ್ಟಿದೆ, ಜೊತೆಯಾಗಿ ಮಲಗಿದಾಗ ಸುರಕ್ಷತೆ ಮತ್ತು ಭದ್ರತಾ ಭಾವ ಇರುವುದರಿಂದ ಮನಸ್ಸು ನಿರಾಳವಾಗಿರುತ್ತದೆ.
ಹಾಗಾಗಿಯೇ ನಿಕಟ ಬಾಂಧವ್ಯ ಹೊಂದಿರುವವರು ಆರೋಗ್ಯವಂತರಾಗಿ ಇರುತ್ತಾರೆ, ದೀರ್ಘಾಯುಷಿಗಳಾಗುತ್ತಾರೆ. ಸ್ಟ್ರೆಸ್ ಹಾರ್ಮೋನ್ ಕೊರಿಸ್ಟೊಲ್ ಹೆಚ್ಚಳದಿಂದ ಹೃದಯದ ಸಮಸ್ಯೆ, ಖಿನ್ನತೆ ಮತ್ತು ಆಟೋ ಇಮ್ಯೂನ್ ಡಿಸಾರ್ಡರ್ ಗಳು ಕಾಣಿಸಿಕೊಳ್ಳುತ್ತವೆ.
ಆದ್ರೆ ಜೊತೆಯಾಗಿ ಮಲಗಿದಾಗ ಸ್ಟ್ರೆಸ್ ಹಾರ್ಮೋನ್ ಕೊರಿಸ್ಟೊಲ್ ಕಡಿಮೆಯಾಗುತ್ತದೆ. ಲವ್ ಹಾರ್ಮೋನ್ ಒಕ್ಸಿಟೊಸಿನ್ ಹೆಚ್ಚಳವಾಗುತ್ತದೆ. ಈ ಒಕ್ಸಿಟೊಸಿನ್ ಗಳು ಜೀರ್ಣಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ ಆರೋಗ್ಯಕ್ಕೆ ಪೂರಕವಾಗಿವೆ.
ಯಾರು ಹೆಚ್ಚು ಬಾರಿ ಅಪ್ಪುಗೆ ಪಡೆದಿದ್ದಾರೋ ಅವರ ರಕ್ತದಲ್ಲಿ ಒಕ್ಸಿಟೊಸಿನ್ ಪ್ರಮಾಣ ಅಧಿಕವಾಗಿತ್ತು. ಅವರಿಗೆ ರಕ್ತದೊತ್ತಡ ಮತ್ತು ಹೃದಯದ ತೊಂದರೆ ಕಾಣಿಸಿಕೊಳ್ಳುವುದು ತೀರಾ ವಿರಳ. ಒಂದೇ ಹಾಸಿಗೆಯಲ್ಲಿ ಮಲಗುವುದೇ ಇದಕ್ಕೆ ಕಾರಣ ಎನ್ನುತ್ತಾರೆ ವಿಜ್ಞಾನಿಗಳು.
ಪ್ರತ್ಯೇಕವಾಗಿ ಮಲಗುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು ಅಂತಾ ಹೇಳಲಾಗ್ತಿದೆ. ಶೇ.39ರಷ್ಟು ದಂಪತಿ ಪ್ರತ್ಯೇಕವಾಗಿ ಮಲಗುವುದರಿಂದ್ಲೇ ಖುಷಿಯಾಗಿದ್ದಾರಂತೆ. ಪ್ರತ್ಯೇಕ ಮಲಗುವ ಕೋಣೆ ಅಥವಾ ಪ್ರತ್ಯೇಕ ಹಾಸಿಗೆಯೇ ಇವರು ಸಂತೋಷವಾಗಿರಲು ಕಾರಣ ಎನ್ನಲಾಗ್ತಿದೆ.
ಇನ್ನು ಸುಖನಿದ್ರೆ ದಂಪತಿಯ ಲೈಂಗಿಕ ಬದುಕಿಗೆ ಕೂಡ ಅತ್ಯಂತ ಪೂರಕ ಅನ್ನೋದು ಸಂಶೋಧನೆಯಿಂದ ದೃಢಪಟ್ಟಿದೆ. ಯಾರು ರಾತ್ರಿ ಚೆನ್ನಾಗಿ ನಿದ್ದೆ ಮಾಡಿರುತ್ತಾರೋ ಅವರು ಮರುದಿನ ಲೈಂಗಿಕ ತೃಪ್ತಿ ಹೊಂದುತ್ತಾರೆ. ಅತಿಯಾಗಿ ನಿದ್ದೆ ಮಾಡಿದ್ರೆ ಅಥವಾ ನಿದ್ರೆ ಕಡಿಮೆಯಾದ್ರೆ ಮಹಿಳೆಯರಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.