ಕೆಲಸ ಹಾಗೂ ಒತ್ತಡದ ಕಾರಣದಿಂದಾಗಿ ಜನರು ನಿದ್ರೆ ಮಾಡೋದೆ ಕಡಿಮೆ ಆಗಿದೆ. ರಾತ್ರಿ ಮೂರ್ನಾಲ್ಕು ಗಂಟೆ ನಿದ್ರೆ ಮಾಡುವವರಿದ್ದಾರೆ. ಮತ್ತೆ ಕೆಲವರು ಟಿವಿ, ಮೊಬೈಲ್ ಹಿಡಿದು ತಡರಾತ್ರಿಯವರೆಗೆ ಗ್ಯಾಜೆಟ್ ವೀಕ್ಷಣೆ ಮಾಡ್ತಾ ಬೆಳಗಿನ ಜಾವ ನಿದ್ರೆಗೆ ಜಾರುತ್ತಾರೆ. ಉತ್ತಮ ಅಹಾರ, ಒಳ್ಳೆಯ ಜೀವನಶೈಲಿ ಜೊತೆ ಉತ್ತಮ ನಿದ್ರೆ ಮನುಷ್ಯನಿಗೆ ಬಹಳ ಮುಖ್ಯ. 7-8 ಗಂಟೆಗಳ ನಿದ್ದೆ ಆರೋಗ್ಯಕ್ಕೆ ಪ್ರಯೋಜನಕಾರಿ. ಒಬ್ಬ ವ್ಯಕ್ತಿ ಇದಕ್ಕಿಂತ ಕಡಿಮೆ ನಿದ್ರೆ ಮಾಡಿದ್ರೆ ಅನೆಕ ಗಂಭೀರ ಖಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.
ನಿಮಗೆ ಏಳರಿಂದ ಎಂಟು ಗಂಟೆ ನಿದ್ರೆ ಸಾಧ್ಯವಿಲ್ಲ ಎಂದಾದ್ರೆ ಬಹಳ ಎಚ್ಚರಿಕೆ ವಹಿಸುವುದು ಮುಖ್ಯ. ತಜ್ಞರ ಪ್ರಕಾರ, ಇಷ್ಟು ನಿದ್ರೆ ಇಲ್ಲದೆ ಹೋದಲ್ಲಿ ಕೆಳಗಿನ ಕೆಲ ರೋಗ ನಿಮ್ಮನ್ನು ಬಾಧಿಸುತ್ತದೆ.
ತೂಕ ಏರಿಕೆ ಸಮಸ್ಯೆ : ನೀವು ಆರು ಗಂಟೆಗಿಂತ ಕಡಿಮೆ ನಿದ್ರೆ ಮಾಡ್ತಿದ್ದರೆ ಶೀಘ್ರವೇ ನಿಮ್ಮ ತೂಕದಲ್ಲಿ ಏರಿಕೆ ಕಂಡು ಬರುತ್ತದೆ ಎನ್ನುತ್ತಾರೆ ತಜ್ಞರು. ಬೊಜ್ಜು ಮತ್ತು ಮಧುಮೇಹದಂತಹ ರೋಗಗಳ ಅಪಾಯವು ಹೆಚ್ಚಾಗುತ್ತದೆ. ನಿದ್ರೆ ಸರಿಯಾಗಿ ಆಗಿಲ್ಲ ಎಂದಾದ್ರೆ ದೇಹದಲ್ಲಿ ಕಾರ್ಟಿಸೋಲ್ ಮತ್ತು ಲೆಪ್ಟಿನ್ ಎಂಬ ಹಾರ್ಮೋನ್ ಗಳ ಮಟ್ಟವು ಹೆಚ್ಚಾಗುತ್ತದೆ. ಇದರಿಂದಾಗಿ ಒಬ್ಬ ವ್ಯಕ್ತಿಯು ಹೆಚ್ಚು ಹಸಿವನ್ನು ಅನುಭವಿಸುತ್ತಾನೆ. ಹೆಚ್ಚಿಗೆ ಆಹಾರ ಸೇವೆನೆ ಮಾಡಿದಾಗ ತೂಕ ಏರಿಕೆಯಾಗುತ್ತದೆ.
ದೇಹಕ್ಕೆ ಅಗತ್ಯವಿರುವ ನಿದ್ರೆ ಸಿಗದೆ ಹೋದಲ್ಲಿ ರೋಗ ನಿರೋಧಕ ಶಕ್ತಿಯ ಸಮಸ್ಯೆ ಕಾಣುತ್ತದೆ. ಬ್ಯಾಕ್ಟೀರಿಯಾ ಮತ್ತು ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ದೇಹ ಕಳೆದುಕೊಳ್ಳುತ್ತದೆ.
ನಿದ್ರೆಯ ಕೊರತೆ ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆಯ ಕೊರತೆಯಿಂದಾಗಿ ದೇಹದಲ್ಲಿ ಊತವು ಕಾಣಿಸಿಕೊಳ್ಳುತ್ತದೆ. ನೆನಪಿನ ಶಕ್ತಿ ಕಡಿಮೆ ಆಗುವುದಲ್ಲದೆ ಮೆದುಳಿಗೆ ಸಂಬಂಧಿಸಿದ ಅನೇಕ ಸಮಸ್ಯೆ ಕಾಡುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.