ಬೇಗ ತೂಕ ಇಳಿಸಿಕೊಳ್ಳಬೇಕು ಎಂಬ ಬಯಕೆಯಿದ್ದರೆ ಸರಿಯಾಗಿ ಅಂದರೆ ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ದೆ ಮಾಡಬೇಕು ಎಂಬುದು ನಿಮಗೆಲ್ಲಾ ತಿಳಿದ ವಿಷಯವೇ. ರಾತ್ರಿ ಮಲಗುವ ಮುನ್ನ ಈ ಕೆಲಸಗಳ ಬಗ್ಗೆ ಎಚ್ಚರ ವಹಿಸಿದರೆ ನೀವು ಬಹು ಬೇಗ ದೇಹ ತೂಕ ಇಳಿಸಬಹುದು.
ಸರಿಯಾಗಿ ನಿದ್ದೆ ಮಾಡುವುದು ಎಷ್ಟು ಮುಖ್ಯವೋ ಸರಿಯಾದ ಭಂಗಿಯಲ್ಲಿ ನಿದ್ದೆ ಮಾಡುವುದೂ ಅಷ್ಟೇ ಮುಖ್ಯ. ಹಾಗಾಗಿ ಕಾಲುಗಳನ್ನು ಬಗ್ಗಿಸಿ, ಬೆನ್ನನ್ನು ಮಡಚಿ ಮಲಗದಿರಿ. ಸಾಧ್ಯವಾದಷ್ಟು ನೇರವಾಗಿ ಮಲಗಿ.
ಕೆಲವೊಮ್ಮೆ ಮೊಬೈಲ್ ಒತ್ತುತ್ತಾ ಕುಳಿತಂತೆ ನಿಮಗೆ ಸಮಯ ಸರಿದಿದ್ದೇ ಅರಿವಿಗೆ ಬರುವುದಿಲ್ಲ. ಹಾಗಾಗಿ ಮಲಗುವ ಕನಿಷ್ಠ ಅರ್ಧ ಗಂಟೆ ಮೊದಲು ಮೊಬೈಲ್ ಆಫ್ ಮಾಡಿ.
ಮಲಗುವ ಕೋಣೆಯನ್ನು ಕತ್ತಲಾಗಿಯೇ ಇಡಿ. ಮಕ್ಕಳಿದ್ದರೆ ಅಥವಾ ಅನಿವಾರ್ಯವಾದರೆ ಮಾತ್ರ ಬೆಡ್ ಲ್ಯಾಂಪ್ ಬಳಸಿ. ರಾತ್ರಿ ಅಥವಾ ಸಂಜೆಯ ಬಳಿಕ ಚಹಾ ಕಾಫಿ ಸೇವನೆ ಮಾಡದಿರಿ. ಇದರಿಂದ ನೀವು ಬಹುಬೇಗ ತೂಕ ಕಳೆದುಕೊಳ್ಳುವುದು ನಿಶ್ಚಿತ.