ಕೈವ್: ನನ್ನ ಜೊತೆ ಮಲಗು ಇಲ್ಲದಿದ್ದರೆ ಇನ್ನು 20 ಪುರುಷರನ್ನು ಕರೆದುಕೊಂಡು ಬರುತ್ತೇನೆ ಎಂದು ಬೆದರಿಸಿ ಗರ್ಭಿಣಿ ಮೇಲೆ ರಷ್ಯಾದ ಸೈನಿಕ ಅತ್ಯಾಚಾರ ಎಸಗಿದ ಮಲಕಲಕುವ ಘಟನೆ ರಷ್ಯಾದ ಸ್ವಾಧೀನದಲ್ಲಿರುವ ಕರ್ಸಾನ್ ನಲ್ಲಿ ನಡೆದಿದೆ.
ರಷ್ಯಾದಿಂದ ನಡೆಯುತ್ತಿರುವ ಬಾಂಬ್ ದಾಳಿಯಿಂದಾಗಿ, ಬದುಕುಳಿದವರು ಮತ್ತು ಅವರ ಕುಟುಂಬ ಸದಸ್ಯರು ಕರ್ಸನ್ನಲ್ಲಿರುವ ತಮ್ಮ ಮನೆಯ ನೆಲಮಾಳಿಗೆಯಲ್ಲಿ ಆಶ್ರಯ ಪಡೆದಿದ್ದರು. ಆದರೆ, ಮುಸ್ಸಂಜೆ ವೇಳೆ ಮಕ್ಕಳನ್ನು ಊಟ ಮಾಡಲು ಕರೆದುಕೊಂಡು ಹೋದಾಗ ಕುಡಿದ ಅಮಲಿನಲ್ಲಿದ್ದ ಸೈನಿಕನ ಕಣ್ಣಿಗೆ ಬಿದ್ದಿದ್ದಾರೆ.
ಆಗ ಅವರನ್ನು ವಿಚಾರಿಸಿದ ಕುಡಿದ ಅಮಲಿನಲ್ಲಿದ್ದ ಯೋಧ ಮೊದಲು ನನ್ನ ತಾಯಿಯನ್ನು ಕರೆದು ಬೇಗನೆ ಬಿಟ್ಟನು ಮತ್ತು ನಂತರ ನನ್ನನ್ನು ಕರೆದ. ನಾನು ಹೋದಾಗ ಆತ ನನ್ನ ಕೈ ಹಿಡಿದೆಳೆದ. ನಾನು ಬಿಡಿಸಿಕೊಳ್ಳಲು ಯತ್ನಿಸಿದಾಗ ನಾನು ಅವನೊಂದಿಗೆ ಮಲಗದಿದ್ದರೆ ಇನ್ನೂ 20 ಜನರನ್ನು ಕರೆದುಕೊಂಡು ಬರುವುದಾಗಿ ಹೇಳಿದ ಎಂದು ಸಂತ್ರಸ್ತೆ ತನ್ನ ಕಷ್ಟವನ್ನು ವಿವರಿಸಿದ್ದಾಳೆ. ಅತ್ಯಾಚಾರ ಯತ್ನವನ್ನು ವಿರೋಧಿಸಿದರೆ ತನ್ನ ಕತ್ತು ಹಿಸುಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದಾರೆ.