ಮುಟ್ಟಿನ ದಿನಗಳಲ್ಲಿ ಮಹಿಳೆಯರಲ್ಲಿ ಕಾಣುವ ಬಹು ದೊಡ್ಡ ಸಮಸ್ಯೆ ಅಂದರೆ ಹೊಟ್ಟೆ ನೋವು. ದೇಹದಲ್ಲಿ ಹಾರ್ಮೋನ್ ಸಮಸ್ಯೆಯಿಂದಾಗಿ ಉಂಟಾಗುವ ಹೊಟ್ಟೆನೋವು ಭಾರೀ ತೊಂದರೆಯನ್ನ ಕೊಡೋದಂತೂ ಹೌದು. ಈ ನೋವಿನಿಂದ ಪಾರಾಗೋಕೆ ಬಿಸಿ ಬಿಸಿಯಾದ ಚಹವನ್ನೋ ಇಲ್ಲವೇ ಹೊಟ್ಟೆಗೆ ಶಾಖವನ್ನ ಕೊಡ್ತೇವೆ. ಅಲ್ಲದೇ ಈ ಹೊಟ್ಟೆನೋವು ನಿದ್ರೆಗೂ ಭಂಗ ತರುತ್ತೆ.
ಮನಸ್ಸು ಹಾಗೂ ದೇಹಕ್ಕೆ ನಿರಾಳ ಅನಿಸಬೇಕು ಅಂದರೆ ನಿದ್ರೆಯಂತೂ ಬೇಕೇ ಬೇಕು. ಸರಿಯಾದ ಭಂಗಿಯಲ್ಲಿ ನೀವು ಮಲಗಿದ್ರಿ ಅಂದರೆ ಈ ಮುಟ್ಟಿನ ನೋವಿನಿಂದಲೂ ನೀವು ಬಚಾವಾಗಬಹುದು.
ಗರ್ಭದಲ್ಲಿರುವ ಮಗು ಯಾವ ಭಂಗಿಯಲ್ಲಿ ಮಲಗುತ್ತೆ ಅನ್ನೋದು ನಿಮಗೆ ತಿಳಿದರಬಹುದು. ನೀವು ಮುಟ್ಟಿನ ಸಂದರ್ಭದಲ್ಲಿ ಇದೇ ರೀತಿ ಮಲಗಿದ್ರೆ ಮುಟ್ಟಿನ ನೋವಿನಿಂದ ಪಾರಾಹಬಹುದು. ಅಲ್ಲದೇ ಈ ರೀತಿ ಮಲಗಿದ್ರೆ ಅತಿಯಾದ ರಕ್ತಸ್ರಾವವೂ ಉಂಟಾಗೋದಿಲ್ಲ.
ಮುಟ್ಟಿನ ನೋವಿನಿಂದ ಪಾರಾಗೋಕೆ ಇನ್ನೊಂದು ಬೆಸ್ಟ್ ವಿಧಾನ ಅಂದರೆ ಮೊಣಕಾಲಿನ ಅಡಿಯಲ್ಲಿ ದಿಂಬುಗಳನ್ನಿಟ್ಟು ಮಲಗೋದು. ಹಾಸಿಗೆಯ ಮೇಲೆ ಅಂಗಾತ ಮಲಗಿ ದಿಂಬುಗಳನ್ನ ನಿಮ್ಮ ಮೊಣಕಾಲುಗಳ ಅಡಿಯಲ್ಲಿ ಇಟ್ಟುಕ್ಕೊಳ್ಳಿ. ನಿಮ್ಮ ಕಾಲುಗಳನ್ನ ನೇರವಾಗಿ ಇಟ್ಟುಕೊಳ್ಳಿ. ದೇಹಕ್ಕಿಂತ ಅತ್ಯಂತ ಎತ್ತರ ಹಾಗೂ ಅತಿ ತಗ್ಗಾಗಿ ಇಟ್ಟುಕೊಂಡ್ರೆ ರಕ್ತಸ್ರಾವ ಹೆಚ್ಚಾಗೋ ಸಾಧ್ಯತೆ ದಟ್ಟವಾಗಿರುತ್ತೆ.
ಯೋಗಾಸನದಲ್ಲಿ ಬಾಲಾಸನ ಅನ್ನೋ ಭಂಗಿ ನಿಮಗೆ ತಿಳಿದರಬಹುದು. ಈ ಭಂಗಿಯಲ್ಲಿ ನಿದ್ರೆ ಮಾಡಬೇಕಾ ಅಂತಾ ಕೇಳಿದ್ರೆ ನಿಮಗೆ ಕೊಂಚ ವಿಚಿತ್ರ ಎನಿಸಬಹುದು. ಆದರೆ ಈ ರೀತಿಯಲ್ಲಿ ಮಲಗೋದ್ರಿಂದ ನಿಮಗೆ ಸಿಕ್ಕಾಪಟ್ಟೆ ಆರಾಮ ಅನಿಸೋದಂತೂ ನಿಜ.
ಮುಟ್ಟಿನ ಸಂದರ್ಭದಲ್ಲಿ ಕೆಲವೊಬ್ಬರಿಗೆ ತಲೆನೋವು ಶುರುವಾಗುತ್ತೆ. ಈ ಭಂಗಿಯಲ್ಲಿ ನೀವು ಕೆಲ ಕಾಲ ಮಲಗಿದ್ರೆ ದೇಹಕ್ಕೆ ಮಾತ್ರವಲ್ಲದೇ ಮನಸ್ಸಿಗೂ ಕೂಡ ನಿರಾಳ ಎನಿಸುತ್ತೆ.