‘ಸ್ಲೀಪ್ ಡೈವೋರ್ಸ್’ ಎಂಬುದು ಅನೇಕರಿಗೆ ಇನ್ನೂ ತಿಳಿದಿಲ್ಲ. ಈ ಬಗ್ಗೆ ಗೊತ್ತಿಲ್ಲದೇ ಅನೇಕರು ಈ ಸಮಸ್ಯೆಗೆ ಬಲಿಯಾಗಿರಬಹುದು. ವಾಸ್ತವವಾಗಿ ಇಬ್ಬರು ವ್ಯಕ್ತಿಗಳು ರಿಲೇಶನ್ಷಿಪ್‌ನಲ್ಲಿದ್ದಾಗ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ರಾತ್ರಿ ಒಟ್ಟಿಗೆ ಮಲಗುತ್ತಾರೆ. ಆದರೆ ಕೆಲವೊಮ್ಮೆ ವಿವಿಧ ಕಾರಣಾಂತರಗಳಿಂದ ಪ್ರತ್ಯೇಕವಾಗಿ ಮಲಗಲು ಪ್ರಾರಂಭಿಸುತ್ತಾರೆ.
ಇದಕ್ಕೆ ಜಗಳವೇ ಕಾರಣ ಎಂದುಕೊಳ್ಳಬೇಡಿ. ಪ್ರತ್ಯೇಕವಾಗಿ ಮಲಗಿದರೆ ಚೆನ್ನಾಗಿ ನಿದ್ರಿಸಬಹುದು ಅನ್ನೋದು ಇದರ ಹಿಂದಿರುವ ಕಾರಣ. ಆದರೆ ಪತಿ-ಪತ್ನಿ ಬೇರೆ ಬೇರೆ ಮಲಗುವುದನ್ನು ನೋಡಿ ಇಬ್ಬರ ಮಧ್ಯೆ ಜಗಳವಾಗಿದೆ ಎಂದು ಸುತ್ತಮುತ್ತಲಿನ ಜನರು ಭಾವಿಸುತ್ತಾರೆ. ಆದರೆ ಸ್ಲೀಪ್ ಡಿವೋರ್ಸ್ ಸಂಬಂಧವನ್ನು ಬಹಳಷ್ಟು ಸುಧಾರಿಸುತ್ತದೆ. ಇದು ದಂಪತಿಗಳಿಗೆ ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ.
ಸ್ಲೀಪ್ ಡಿವೋರ್ಸ್ ಎಂಬ ಪದವನ್ನು ಕೇಳಿ ಭಯಪಡಬೇಕಿಲ್ಲ. ದಂಪತಿಗಳು ಶಾಶ್ವತವಾಗಿ ದೂರವಾದರೆ ಅದು ವಿಚ್ಛೇದನ. ಆದರೆ ರಾತ್ರಿ ಬೇರೆ ಬೇರೆ ಮಲಗಿದರೆ ಅದು ಸ್ಲೀಪ್ ಡಿವೋರ್ಸ್. ಸಂಗಾತಿಗೆ ಗೊರಕೆ ಹೊಡೆಯುವ ಅಭ್ಯಾಸವಿದ್ದರೆ ಪತ್ನಿಗೆ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಪತ್ನಿ ಗೊರಕೆ ಹೊಡೆದರೆ ನಿದ್ದೆಯಿಲ್ಲದೆ ಪತಿ ಕಂಗಾಲಾಗುತ್ತಾನೆ.
ಈ ಕಾರಣದಿಂದಲೂ ಪತಿ-ಪತ್ನಿ ಬೇರೆ ಬೇರೆಯಾಗಿ ಮಲಗುತ್ತಾರೆ. ನಿದ್ರೆಯ ಕೊರತೆಯಿಂದಾಗಿ ಅನೇಕ ಬಾರಿ ನಮಗೆ ಕಿರಿಕಿರಿ ಹೆಚ್ಚಾಗುತ್ತದೆ. ದಂಪತಿಗಳು ಪ್ರತ್ಯೇಕವಾಗಿ ಮಲಗಿದರೆ ಚೆನ್ನಾಗಿ ನಿದ್ರಿಸಬಹುದು. ಇದರಿಂದ ಅವರ ಆರೋಗ್ಯವೂ ಸುಧಾರಿಸುತ್ತದೆ. ದಂಪತಿಗಳ ನಡುವೆ ಪರ್ಸನಲ್ ಸ್ಪೇಸ್ ಕೂಡ ಇರಬೇಕು. ಒಬ್ಬಂಟಿಯಾಗಿ ಮಲಗಿದಾಗ ಈ ಸಮಯ ಸಿಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಯೂ ನಿದ್ರೆಯ ದಿನಚರಿಯನ್ನು ಹೊಂದಿರುತ್ತಾನೆ. ಅವರ ನಿದ್ರೆಯ ಚಕ್ರವು ಸಂಗಾತಿಯೊಂದಿಗೆ ಹೊಂದಿಕೆಯಾಗದೇ ಇರಬಹುದು. ಇದರಿಂದಾಗಿ ಅವರ ಸಂಬಂಧದಲ್ಲಿ ಅನೇಕ ರೀತಿಯ ಸಮಸ್ಯೆಗಳು ಬರುತ್ತವೆ. ಅಂತಹ ಸಂದರ್ಭದಲ್ಲಿ ಸ್ಲೀಪ್ ಡಿವೋರ್ಸ್ ಸಹಕಾರಿಯಾಗಿದೆ. ಇಬ್ಬರೂ ಪ್ರತ್ಯೇಕವಾಗಿ ಮಲಗಿದಾಗ ಅವರ ನಡುವೆ ಜಗಳಗಳು ಆಗುವುದಿಲ್ಲ.