alex Certify ಎಸ್.ಎಲ್. ಭೈರಪ್ಪನವರಿಗೆ ಮೋದಿಯವರ ಓಲೈಕೆ ಏಕೆ ಬೇಕು ಎಂದು ಪ್ರಶ್ನಿಸಿದ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಸ್.ಎಲ್. ಭೈರಪ್ಪನವರಿಗೆ ಮೋದಿಯವರ ಓಲೈಕೆ ಏಕೆ ಬೇಕು ಎಂದು ಪ್ರಶ್ನಿಸಿದ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್….!

ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿದ್ದು, ಈ ಸಂದರ್ಭದಲ್ಲಿ ಮಾತನಾಡುವ ವೇಳೆ, ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದ ಕಾರಣದಿಂದಲೇ ನನಗೆ ಪ್ರಶಸ್ತಿ ಬಂದಿದೆ ಎಂದು ಹೇಳಿದ್ದರು.

ಅಲ್ಲದೆ 2024 ಹಾಗೂ 2029  ರ ಲೋಕಸಭಾ ಚುನಾವಣೆಯಲ್ಲಿಯೂ ಮೋದಿಯವರ ಅಧಿಕಾರಾವಧಿ ಇರಲಿ. ಆ ಬಳಿಕ ಮೋದಿ ನಿವೃತ್ತರಾಗಿ ತಮ್ಮಷ್ಟೇ ಸಮರ್ಥರನ್ನು ನೇಮಿಸಬೇಕು ಎಂದು ಎಸ್.ಎಲ್. ಭೈರಪ್ಪ ಅಭಿಪ್ರಾಯಪಟ್ಟಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಭೈರಪ್ಪನವರಿಗೆ ಪ್ರಶಸ್ತಿ ಬರಲು ಮೋದಿ ಕಾರಣರಲ್ಲ ಬದಲಿಗೆ ಅವರ ಸಾಹಿತ್ಯ ಕೃಷಿ ಕಾರಣಕ್ಕೆ ಇದು ಸಂದಿದೆ. ಈ ವಯಸ್ಸಿನಲ್ಲಿ ಭೈರಪ್ಪನವರಿಗೆ ಓಲೈಕೆ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ನೀವು ಬರವಣಿಗೆ ಆರಂಭಿಸಿದಾಗ ಮೋದಿ ಎಲ್ಲಿದ್ದರೆಂಬುದೇ ಗೊತ್ತಿಲ್ಲ. ಮೋದಿಯವರ ಕಾರಣಕ್ಕೆ ಪ್ರಶಸ್ತಿ ಬಂದಿದೆ ಎಂಬ ನಿಮ್ಮ ಹೇಳಿಕೆ ಪ್ರಶಸ್ತಿಗೆ ಅವಮಾನ ಮಾಡಿದಂತೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...