ಬೆಂಗಳೂರು: ರಾಜ್ಯದ ಹಲವೆಡೆ ಇಂದು ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಕಂಡುಬಂದಿದೆ. ಬೆಂಗಳೂರು, ಕೋಲಾರ ಸೇರಿದಂತೆ ಹಲವು ಕಡೆ ಬಾನಂಗಳದಲ್ಲಿ ನದಿಯ ಆಕೃತಿಯಲ್ಲಿ ಬೆಳಕಿನ ರಚನೆ ಮೂಡಿ ಮೂಡಿದೆ.
ಬೆಳ್ಳಂಬೆಳಗ್ಗೆ ಆಕಾಶ ದಿಟ್ಟಿಸಿದವರು ಬೆಳಕಿನ ನದಿಯ ಚಿತ್ತಾರವನ್ನು ಕಂಡು ತಮ್ಮ ಮೊಬೈಲ್ ಗಳಲ್ಲಿ ಫೋಟೋ ವಿಡಿಯೋ ಮಾಡಿಕೊಂಡಿದ್ದು, ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜ್ಯದ ಹಲವು ಕಡೆಗಳಲ್ಲಿ ಕಂಡು ಬಂದ ಬೆಳಕಿನ ಚಿತ್ತಾರದ ಫೋಟೋಗಳ ಬಗ್ಗೆ ಭಾರೀ ಚರ್ಚೆಯಾಗಿದೆ.