ಕೆಲವೊಮ್ಮೆ ಪ್ರಾಣವನ್ನು ಪಣಕ್ಕಿಟ್ಟು ಹುಚ್ಚು ಸಾಹಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಂಥ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ
ಹಿಮಪಾತದಲ್ಲಿ ಸಿಕ್ಕಿಬಿದ್ದ ಸ್ಕೀಯರ್ ವಿಡಿಯೋ ಇದಾಗಿದೆ. ಹಿಮಪಾತದ ನಡುವೆ ವ್ಯಕ್ತಿಯೊಬ್ಬ ಅಪಾಯಕಾರಿ ಎನ್ನುವಂತ ಸ್ಕೀಯರ್ ಮಾಡುತ್ತಿದ್ದಾರೆ. ಇದನ್ನು ತೋರಿಸಲು ಅವರು ಹೆಲ್ಮೆಟ್ ಕ್ಯಾಮೆರಾ ಧರಿಸಿದ್ದಾರೆ. ಈ ಕ್ಯಾಮೆರಾದ ಮೂಲಕ ಅವರ ಕ್ರೀಡೆಯನ್ನು ನೋಡಬಹುದು.
ಫೆಬ್ರವರಿ 11 ರಂದು, ಜಾಕ್ಸನ್ ಹೋಲ್ ಮೌಂಟೇನ್ ರೆಸಾರ್ಟ್ ಬಳಿಯ ಬ್ಯಾಕ್‌ಕಂಟ್ರಿಯಲ್ಲಿ ಸ್ಕೀಯಿಂಗ್ ಮಾಡುವಾಗ, ಆದ ಅನಾಹುತವನ್ನು ಲೀಪರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಸ್ಕೀಯಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಹಿಮಪಾತ ಹೇಗೆ ಆಯಿತು ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಕೂದಲೆಳೆ ಅಂತರದಲ್ಲಿ ತಾವು ಸಾವಿನ ದವಡೆಯಿಂದ ಪಾರಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇಂಥ ಹುಚ್ಚು ಸಾಹಸವನ್ನು ಮಾಡುವುದು ಏಕೆ ಎಂದು ಹಲವು ಬಳಕೆದಾರರು ಪ್ರಶ್ನಿಸಿದ್ದಾರೆ.
https://youtu.be/7L69iXpPjIs