
ದೇಶದ ಆರ್ಥಿಕ ರಾಜಧಾನಿ ಮುಂಬೈಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಮಹಾನಗರಿ ಮುಂಬೈಗೆ ಸಾವಿರಾರು ಜನರು ಬಂದ್ರೂ ಪ್ರಸಿದ್ಧ ತಾಜ್ ಹೋಟೆಲ್ ನಲ್ಲಿ ತಂಗುವವರು ಬಹಳ ಕಡಿಮೆ. ತಾಜ್ ಹೋಟೆಲ್‌ನ ಒಂದು ದಿನದ ಬಾಡಿಗೆ ತುಂಬಾ ದುಬಾರಿಯಾಗಿರುವುದು ಇದಕ್ಕೆ ಕಾರಣ. ಇಲ್ಲಿನ ಬಾಡಿಗೆ ಸಾಮಾನ್ಯ ಜನರು ಭರಿಸಲು ಸಾಧ್ಯವಿಲ್ಲ. ಸೆಲೆಬ್ರಿಟಿಗಳು ಅಥವಾ ಉದ್ಯಮಿಗಳು ಮಾತ್ರ ಈ ಹೋಟೆಲ್‌ನಲ್ಲಿ ಉಳಿಯುತ್ತಾರೆ.
ತಾಜ್ ಹೊಟೇಲ್ ಬಾಡಿಗೆ ಬಗ್ಗೆ ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಹಣದಬ್ಬರ ತಪ್ಪಿಸಲು ಇರುವ ಒಂದೇ ಒಂದು ಮಾರ್ಗ ಟೈಂ ಮಶಿನ್. ಖರ್ಚು ಕಡಿಮೆ ಮಾಡಲು ಇದೊಂದೇ ಮಾರ್ಗವಿದೆ. ಮುಂಬೈನ ತಾಜ್ ಹೋಟೆಲ್ ನ ಒಂದು ಕೊಠಡಿಯ ಬಾಡಿಗೆ ಕೇವಲ 6 ರೂಪಾಯಿಗಳಿದ್ದ ಒಂದು ಕಾಲವಿತ್ತು ಎಂದು ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಆನಂದ್ ಮಹೀಂದ್ರಾ ಟ್ವೀಟ್, ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. 8 ಸಾವಿರಕ್ಕೂ ಹೆಚ್ಚು ಜನರು ಈ ಟ್ವೀಟ್ ಅನ್ನು ಲೈಕ್ ಮಾಡಿದ್ದಾರೆ. 850 ಕ್ಕೂ ಹೆಚ್ಚು ಬಳಕೆದಾರರು ಇದನ್ನು ರೀಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮೂಲಕ, ಆನಂದ್ ಮಹೀಂದ್ರಾ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ಟೀಕಿಸಿದ್ದಾರೆ. 1903 ರಲ್ಲಿ, ಮುಂಬೈನ ಕಡಲತೀರದ ಮೇಲೆ ತಾಜ್ ಹೋಟೆಲ್ ಅನ್ನು ಜಮ್ಸೆಟ್ಜಿ ಟಾಟಾ ಸ್ಥಾಪಿಸಿದರು. ಈ ಹೋಟೆಲ್‌ನಲ್ಲಿ 285 ಕೊಠಡಿಗಳಿವೆ. ತಾಜ್ ಹೋಟೆಲ್ ಐಷಾರಾಮಿ ಕೊಠಡಿಗಳನ್ನು ಹೊಂದಿದೆ.