ಮಧ್ಯ ಪ್ರದೇಶದ ದೇವಾಸ್‌ನ ಮಾತಾ ತೇಕ್ರಿ ದೇವಸ್ಥಾನದ ಬಳಿ ರೋಪ್‌ವೇ ಕಾರೊಂದು ಭಾರೀ ಅಫಘಾತಕ್ಕೆ ಸಿಲುಕುವ ಸಾಧ್ಯತೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಕಾರಿನಲ್ಲಿದ್ದ ಆರು ಪ್ರವಾಸಿಗರನ್ನು ರಕ್ಷಿಸಲಾಗಿದೆ.
ಭಾರೀ ಬಿರುಗಾಳಿಯ ಕಾರಣದಿಂದ ರೋಪ್‌ವೇಯ ಕೇಬಲ್ ಪುಲ್ಲಿಯಿಂದ ಕಳಚಿಕೊಂಡಿತ್ತು ಎಂದು ಡಿಎಸ್ಪಿ ದೇವಾಸ್ ವಿವೇಕ್ ಸಿಂಗ್ ತಿಳಿಸಿದ್ದಾರೆ. ಒಂದು ಗಂಟೆಯ ಪರಿಶ್ರಮದ ಬಳಿಕ ಕಾರಿನಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಲಾಗಿದೆ.
ಭಾರೀ ಮಳೆ ಕಾರಣದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡತಡೆಗಳು ಉಂಟಾದರೂ ಸಹ ರೋಪ್‌ವೇ ಕಾರ್ಮಿಕರ ಪರಿಶ್ರಮದಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.