ಕಳೆದ 15 ದಿನಗಳಿಂದ ಜ್ವರ ಹಾಗೂ ಇತರೆ ಅನಾರೋಗ್ಯದಿಂದ ಆರು ಮಕ್ಕಳು ಮೃತಪಟ್ಟಿರುವ ಘಟನೆ ಹರಿಯಾಣದ ಪಲ್ವಾಲ್ ಜಿಲ್ಲೆಯ ಚಿಲ್ಲಿ ಗ್ರಾಮದಲ್ಲಿ ಸಂಭವಿಸಿದೆ.
ಹಾಲಿನ ಅಭಾವದಿಂದ ಮಗುವೊಂದು ಮನೆಯಲ್ಲಿಯೇ ಮೃತಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ ಪಲ್ವಾಲ್ ನ ಮುಖ್ಯ ವೈದ್ಯಾಧಿಕಾರಿ ಡಾ. ಬ್ರಹ್ಮ ದೀಪ್, ಮೃತಪಟ್ಟ ಮಕ್ಕಳು 10ಕ್ಕಿತ ಕಡಿಮೆ ವಯಸ್ಸಿನವರು ಎಂದು ಹೇಳಿದ್ದಾರೆ.
BIG NEWS: ವಾಟ್ಸಾಪ್ ಮೂಲಕವೂ ಕೋವಿಡ್ ಲಸಿಕೆ ಸ್ಲಾಟ್ ಬುಕ್ ಮಾಡಲು ಸಿಗ್ತಿದೆ ಅವಕಾಶ
ಮೃತಪಟ್ಟವರೆಲ್ಲರ ಕೊರೋನಾ ವರದಿ ನೆಗೆಟಿವ್ ಬಂದಿರುವುದಾಗಿ ಅವರು ತಿಳಿಸಿದ್ದಾರೆ. ಅಲ್ಲದೆ ಡೆಂಗ್ಯೂ ಪರೀಕ್ಷೆಯಲ್ಲೂ ಕೂಡ ನೆಗೆಟಿವ್ ಬಂದಿರುವುದಾಗಿ ಹೇಳಿದ್ದಾರೆ.
ಮಕ್ಕಳ ಸಾವಿಗೆ ಅನೈರ್ಮಲ್ಯ ಹಾಗೂ ಅಕ್ರಮ ಕುಡಿಯುವ ನೀರಿನ ಪೈಪ್ ಸಂಪರ್ಕಗಳು ಕಲುಷಿತಗೊಂಡು ಈ ದುರಂತ ಸಂಭವಿಸಿರಬಹುದು ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಈ ಬಗ್ಗೆ ತನಿಖೆ ನಡೆಸಿ, ಸತ್ಯಾಸತ್ಯತೆ ಹೊರಬಂದ ಬಳಿಕವೇ ಸಾವಿಗೆ ಏನು ಕಾರಣ ಎಂದು ತಿಳಿಯಬಹುದು ಎಂದು ಹೇಳಿದೆ.