
ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರುವ ವೀಡಿಯೊ ಪೋಸ್ಟ್ ನ ಪ್ರಕಾರ ಬಾಲಕಿಯನ್ನು ತನ್ನ ಕೋಣೆಗೆ ಬರದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಿಕ್ಷಕ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಅದೃಷ್ಟವಶಾತ್ ಗಲಾಟೆ ಕೇಳಿದ ನೆರೆಹೊರೆಯವರು ಕೂಡಲೇ ಜಮಾಯಿಸಿದರು. ಬಾಗಿಲನ್ನು ಒಡೆದು ವಿದ್ಯಾರ್ಥಿನಿಯನ್ನು ಶಿಕ್ಷಕನ ಹಿಡಿತದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಶಿಕ್ಷಕನನ್ನು ಪೊಲೀಸರಿಗೆ ಹಸ್ತಾಂತರಿಸುವ ಮೊದಲು ತೀವ್ರವಾಗಿ ಥಳಿಸಿದರು.
ಈ ಘಟನೆಯು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಜಾಗರೂಕತೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ. ಇಂತಹ ಹೇಯ ಕೃತ್ಯಗಳಿಂದ ಮಕ್ಕಳನ್ನು ರಕ್ಷಿಸುವಲ್ಲಿ ಸಮುದಾಯ ಜಾಗೃತಿ ಮತ್ತು ತ್ವರಿತ ಕ್ರಮ ಅತ್ಯಗತ್ಯ.