
ಸೀತಾಫಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ತಿರುಳು ಮತ್ತು ಬೀಜ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಕೀಟನಾಶಕ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ತಲೆ ಹೊಟ್ಟು, ಹೇನುಗಳನ್ನು ನಿವಾರಿಸಲು ಸಹಕಾರಿ. ಹಾಗಾದ್ರೆ ಇದನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಯೋಣ.
ಸೀತಾಫಲ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಪೇಸ್ಟ್ ಮಾಡಿ ಅದಕ್ಕೆ ತೆಂಗಿನೆಣ್ಣೆಯನ್ನು ಬೆರೆಸಿ. ಈ ಮಿಶ್ರಣವನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಬಿಸಿ ಮಾಡಿ. ತೈಲದ ಬಣ್ಣ ಬದಲಾದಾಗ ಇಳಿಸಿ ಸೋಸಿ ಗಾಜಿನ ಬಾಟಲಿಯಲ್ಲಿ ಸ್ಟೋರ್ ಮಾಡಿ ಇಡಿ.
ಈ ಎಣ್ಣೆಯನ್ನ ಸ್ನಾನ ಮಾಡುವ ಮುನ್ನ ಕೂದಲಿಗೆ ಹಚ್ಚಿ ಮಸಾಜ್ ಮಾಡಿ ಕೆಲವು ಸಮಯದ ಬಳಿಕ ಶಾಂಪು ಬಳಸಿ ವಾಶ್ ಮಾಡಿ. ಇದನ್ನು ವಾರಕ್ಕೆ 2 ಬಾರಿ ಮಾಡಿ.