
ಆಶಿಶ್ ಸೇರಿದಂತೆ 13 ಮಂದಿ ಆರೋಪಿಗಳ ವಿರುದ್ಧ ಎಸ್ಐಟಿ ಕೊಲೆ ಯತ್ನದ ಆರೋಪ ಹೊರಡಿಸಿದೆ. ಅಪಾಯಕಾರಿ ಶಸ್ತ್ರಾಸ್ತ್ರಗಳು ಹಾಗೂ ಅನೇಕ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯದಿಂದಾಗಿ ಅನೇಕರಿಗೆ ಗಂಭೀರ ಗಾಯ ಉಂಟಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಎಸ್ಐಟಿ ವರದಿಯನ್ನು ಟ್ವಿಟರ್ನಲ್ಲಿ ಪತ್ರಕರ್ತರು ಶೇರ್ ಮಾಡಿದ್ದಾರೆ. ಈ ಪತ್ರದಲ್ಲಿ ಎಸ್ಐಟಿ ತನಿಖಾಧಿಕಾರಿ ವಿದ್ಯಾರಾಮ್ ದಿವಾಕರ್, ಈ ಘಟನೆಯು ಉದ್ದೇಶಪೂರ್ವಕವಾಗಿದೆ ಇದು ಯಾವುದೇ ನಿರ್ಲಕ್ಷ್ಯದಿಂದ ಸಂಭವಿಸಿದ್ದಲ್ಲ ಎಂದು ಬರೆದಿರೋದನ್ನು ಕಾಣಬಹುದಾಗಿದೆ.
ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯನ್ನು ಬಳಕೆ ಮಾಡುವಂತೆಯೂ ಎಸ್ಐಟಿ ಮನವಿ ಮಾಡಿದೆ.
ಅಕ್ಟೋಬರ್ 3ರಂದು ನಾಲ್ವರು ರೈತರು ಸೇರಿದಂತೆ 8 ಮಂದಿಯು ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ಬೆಂಗಾವಲು ವಾಹನದಡಿಗೆ ಸಿಲುಕಿ ಸಾವನ್ನಪ್ಪಿದ್ರು.
ಘಟನೆಯಲ್ಲಿ ಭಾಗಿಯಾಗಿರುವ ಕಾರುಗಳಲ್ಲಿ ಒಂದು ಆಶಿಶ್ ಮಿಶ್ರಾರಿಗೆ ಸೇರಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು.