ಆಗಸ್ಟ್ 31ರ ಗುರುವಾರ ರಕ್ಷಾಬಂಧನ ಆಚರಿಸಲಾಗ್ತಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ಶಿವನಿಗೆ ವಿಶೇಷ ಪೂಜೆ ಮಾಡುವುದು ಶುಭಕರ. ಯಾವ ವ್ಯಕ್ತಿ ವಿಧಿ-ವಿಧಾನದ ಮೂಲಕ ಪೂಜೆ ಮಾಡ್ತಾನೋ ಆತನ ಆಯಸ್ಸು ವೃದ್ಧಿಯಾಗಲಿದೆ. ಹಾಗೆ ರಾಖಿ ಕಟ್ಟುವ ಮೊದಲು ಸಹೋದರನ ಆಯಸ್ಸು ಹಾಗೂ ಸಂತೋಷ ವೃದ್ಧಿಗೆ ಸಹೋದರಿಯರು ವಿಶೇಷ ಪೂಜೆ ಮಾಡಬೇಕು.
ರಾಶಿಗನುಗುಣವಾಗಿ ಸಹೋದರಿಯರು ರಾಖಿ ಕಟ್ಟುವ ಮೊದಲು ದೇವರ ಪೂಜೆ ಮಾಡಬೇಕಾಗುತ್ತದೆ.
ಮೇಷ : ಈ ರಾಶಿಯವರು ಗಣೇಶನಿಗೆ ಪೂಜೆ ಮಾಡಿ ದರ್ಬೆಯನ್ನು ಅರ್ಪಿಸಬೇಕು.
ವೃಷಭ : ಈ ರಾಶಿಯವರು ಸಹೋದರನಿಗೆ ರಾಖಿ ಕಟ್ಟುವ ಮೊದಲು ಭಗವಂತ ಶಿವನಿಗೆ ರಾಖಿ ಕಟ್ಟಿ ಜಲವನ್ನು ಅರ್ಪಿಸಿ.
ಮಿಥುನ : ಸೂರ್ಯ ದೇವನಿಗೆ ನೀರನ್ನು ಅರ್ಪಿಸಿ. ದೇವಿಗೆ ಸಿಂಧೂರ ಅರ್ಪಿಸಿ ನಂತ್ರ ರಾಖಿ ಕಟ್ಟಿ.
ಕರ್ಕ : ಗಣೇಶನಿಗೆ ರಾಖಿ ಕಟ್ಟಿ ನಂತ್ರ ಸಹೋದರನಿಗೆ ರಾಖಿ ಕಟ್ಟಿ.
ಸಿಂಹ : ಸಹೋದರನಿಗೆ ರಾಖಿ ಕಟ್ಟುವ ಮೊದಲು ಈಶ್ವರನಿಗೆ ಚಂದನ ಅರ್ಪಿಸಿ.
ಕನ್ಯಾ : ಹನುಮಂತನಿಗೆ ರಾಖಿ ಕಟ್ಟಿ. ಕೆಂಪು ಹೂವನ್ನು ಅರ್ಪಿಸಿ.
ತುಲಾ : ಬಾಲಗೋಪಾಲನಿಗೆ ಸಿಹಿ ಅರ್ಪಿಸಿ ನಂತ್ರ ರಾಖಿ ಕಟ್ಟಿ.
ವೃಶ್ಚಿಕ : ಅಶ್ವತ್ಥ ಮರಕ್ಕೆ ಜಲವನ್ನು ಅರ್ಪಿಸಿ ದೀಪವನ್ನು ಹಚ್ಚಿ ನಂತ್ರ ರಾಖಿ ಕಟ್ಟಿ.
ಧನು : ಭಗವಂತ ಶಿವನಿಗೆ ಸುಗಂಧ ದ್ರವ್ಯ ಹಾಗೂ ಜಲವನ್ನು ಅರ್ಪಿಸಿ ರಾಖಿ ಕಟ್ಟಿ.
ಮಕರ : ಶ್ರೀಕೃಷ್ಣನಿಗೆ ಹಳದಿ ಅರ್ಪಿಸಿ.
ಕುಂಭ : ಹನುಮಂತನಿಗೆ ಕೆಂಪು ಹೂ ಅರ್ಪಿಸಿ ನಂತ್ರ ರಾಖಿ ಕಟ್ಟಿ.
ಮೀನ : ಭಗವಂತ ಶಿವನಿಗೆ ಮೊಸರು ಹಾಗೂ ನೀರು ಅರ್ಪಿಸಿದ ನಂತ್ರ ರಾಖಿ ಕಟ್ಟಿ.