
ಇತ್ತೀಚೆಗೆ ಭಾರತೀಯ ಮದುವೆಯ ವಿಡಿಯೋಗಳು ಭಾರಿ ಕ್ರೇಜ್ ಹುಟ್ಟುಹಾಕಿವೆ. ಇಲ್ಲಿ ಹಾಸ್ಯ, ಮೋಜು-ಮಸ್ತಿ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಸದ್ಯ ಭಾವ-ನಾದಿನಿಯ ಮೋಜಿನ ತುಣುಕು ಭಾರಿ ವೈರಲ್ ಆಗಿದ್ದು, ಜನರನ್ನು ರಂಜಿಸಿದೆ.
ಎಲ್ಲರಿಗೂ ತಿಳಿದಿರುವಂತೆ ಭಾವ-ನಾದಿನಿಯ ಸಂಬಂಧವು ಚುಡಾಯಿಸುವಿಕೆ ಹಾಗೂ ಕಾಲು ಎಳೆಯುವಿಕೆಯಿಂದ ತುಂಬಿದೆ. ಹಾಗೂ ಇದೊಂದು ವಿಶೇಷವಾದ ಬಂಧವಾಗಿದೆ. ಮೋಜು, ಕಿಡಿಗೇಡಿತನ ಹಾಗೂ ಹಾಸ್ಯಗಳು ಮದುವೆಯಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಹಾಗೆಯೇ ವಧುವಿನ ಸಹೋದರಿಯು ವರನ ಬೂಟನ್ನು ಬಚ್ಚಿಡುವುದು ಒಂಥರಾ ಸಂಪ್ರದಾಯ ಅನ್ನೋ ಹಾಗಾಗಿದೆ. ಬೇರೆ ದಾರಿಯಿಲ್ಲದೆ ಆತ ಭಾರಿ ಮೊತ್ತದ ಹಣ ಪಾವತಿಸಬೇಕಾಗುತ್ತದೆ. ಇಂಥಹುದೇ ಮೋಜಿನ ಆಚರಣೆಯನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
BIG BREAKING NEWS: ಲಸಿಕೆ ನೀಡಿಕೆಯಲ್ಲಿ ಮತ್ತೊಂದು ದಾಖಲೆ, ಒಂದೇ ದಿನ 1 ಕೋಟಿ ಜನರಿಗೆ ವ್ಯಾಕ್ಸಿನ್
ವರನ ಶೂಗಳನ್ನು ಕದಿಯುವ ನಾದಿನಿಯು ಪ್ರತಿಯಾಗಿ ಆತನಿಂದ ಹಣಕ್ಕೆ ಬೇಡಿಕೆಯಿಡುತ್ತಾಳೆ. ಈ ವೇಳೆ ಸಲ್ಮಾನ್ ಖಾನ್ – ಮಾಧುರಿ ದೀಕ್ಷಿತ್ ಅಭಿನಯದ ಜನಪ್ರಿಯ ಹಾಡು ‘ಜೂಟೆ ಲೋ ಪೈಸೆ ದೊ’ ಹಾಕಲಾಗಿದೆ. ವಧುವಿನ ಸಹೋದರಿ ಹಾಡನ್ನು ಲಿಪ್ ಸಿಂಕ್ ಮಾಡಲು ಪ್ರಾರಂಭಿಸಿದಾಗ ವರ ನೋಟುಗಳೊಂದಿಗೆ ನಗುತ್ತಾ ನಿಂತಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದು. ಸದ್ಯ, ಈ ವಿಡಿಯೋ ಭಾರಿ ವೈರಲ್ ಆಗಿದೆ.
https://www.youtube.com/watch?v=QWn3vyDmVXk&feature=youtu.be