ಶಿರಸಿ: ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ, ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಎಂದೇ ಹೇಳಲಾಗುವ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್ 19ರಿಂದ 27ರವರೆಗೆ ನಡೆಯಲಿದೆ.
ಶಿರಸಿಯ ಮಾರಿಕಾಂಬ ದೇವಾಲಯದಲ್ಲಿ ಭಾನುವಾರ ನಡೆದ ಜಾತ್ರಾ ಮಹೋತ್ಸವ ನಿಗದಿ ಕಾರ್ಯಕ್ರಮದಲ್ಲಿ ದಿನಾಂಕ ನಿಗದಿಗೊಳಿಸಿ ಶರಣ್ ಆಚಾರ್ಯ ಪ್ರಕಟಿಸಿದ್ದಾರೆ. ಜನವರಿ 31 ರಿಂದ ಜಾತ್ರೆ ಪೂರ್ವದ ಉತ್ತರಂಗ ಮೊದಲನೇ ಕಾರ್ಯಕ್ರಮ ಆರಂಭವಾಗುತ್ತದೆ. ಮಾರ್ಚ್ 19 ರಂದು ರಥಕ್ಕೆ ಕಲಶ ಪ್ರತಿಷ್ಠೆ, ಕಲ್ಯಾಣ ಪ್ರತಿಷ್ಠೆ, ಜ. 20ರಂದು ಬೆಳಗ್ಗೆ ದೇವಿಯ ರಥೋತ್ಸವ, ಜ. 21ರಿಂದ ಜಾತ್ರಾ ಗದ್ದುಗೆಯಲ್ಲಿ ಸೇವಾ ಸ್ವೀಕಾರ, ಜ. 27ರಂದು ಜಾತ್ರಾ ವಿಧಿ ವಿಧಾನಗಳು ಮುಗಿಯಲಿದೆ. ಯುಗಾದಿಗೆ ದೇವಾಲಯದಲ್ಲಿ ಮಾರಿಕಾಂಬ ದೇವಿ ಪುನರ್ ಪ್ರತಿಷ್ಠೆ ನಡೆಯಲಿದೆ.