ಬೆಂಗಳೂರು : ಸರ್.. ನನಗೆ ದಯಾಮರಣ ಕೊಡಿ ಎಂದು ಸಿಎಂ ಜನಸ್ಪಂದನಾ ಕಾರ್ಯಕ್ರಮದಲ್ಲಿ ವಿಶೇಷಚೇತನ ಮಹಿಳೆಯೊಬ್ಬರು ಕಣ್ಣೀರಿಟ್ಟ ಘಟನೆ ನಡೆದಿದೆ.
ವಿಶೇಷಚೇತನ ಮಹಿಳೆ ಮೀನಾ ಎಂಬುವವರು ಜನಸ್ಪಂದನಾ ಕಾರ್ಯಕ್ರಮಕ್ಕೆ ಬಂದಿದ್ದು, ನಾನು ಬಹಳ ಕಷ್ಟದಲ್ಲಿದ್ದೀನಿ, ಜೀವನ ನಡೆಸೋಕೆ ಬಹಳ ಕಷ್ಟವಾಗುತ್ತಿದೆ, ನನಗೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಕಣ್ಣೀರಿಟ್ಟಿದ್ದಾರೆ. ನಾನು ಅಂಗವಿಕಲೆ, ನನಗೆ ಯಾರೂ ಕೆಲಸ ಕೊಡುತ್ತಿಲ್ಲ, ನನ್ನ ಮಗನ ಓದಿಗೂ ಸಹಾಯ ಮಾಡಬೇಕು, ನನಗೆ ಜೀವನ ನಡೆಸಲು ಬಹಳ ಕಷ್ಟ ಆಗುತ್ತಿದೆ. ಯಾರ ಬಳಿ ಆದರೂ ಕೆಲಸ ಕೇಳಿದ್ರೆ ಒಂದು ದಿನ ಇರು ಬಾ ಎಂದು ಅಸಹ್ಯವಾಗಿ ಕರೆಯುತ್ತಾರೆ ಎಂದು ಕಣ್ಣೀರು ಹಾಕಿದರು.