ದೇಶದಲ್ಲಿ ಕೊರೊನಾ ಲಸಿಕೆಯ ಅಭಾವದಿಂದ ಕಂಗೆಟ್ಟಿದ್ದ ಜನತೆಗೆ ಶುಭಸುದ್ದಿಯೊಂದು ಸಿಕ್ಕಿದ್ದು ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಿಂಗಲ್ ಡೋಸ್ ಕೊರೊನಾ ಲಸಿಕೆಯಾದ ಸ್ಪುಟ್ನಿಕ್ ಲೈಟ್ಗೆ ಚಾಲನೆ ನೀಡುವ ತಯಾರಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆಗಳನ್ನ ಭಾರತದಲ್ಲಿ ಲಾಂಚ್ ಮಾಡಲು ಡಾ. ರೆಡ್ಡೀಸ್ ಔಷಧಾಲಯ ಕೇಂದ್ರ ಸರ್ಕಾರ ಜೊತೆ ಮಹತ್ವದ ಮಾತುಕತೆಯನ್ನ ಮುಂದುವರಿಸಿದೆ.
ಒಂದು ವೇಳೆ ಈ ಲಸಿಕೆಗೆ ಅನುಮೋದನೆ ಸಿಕ್ಕಲ್ಲಿ ಸ್ಪುಟ್ನಿಕ್ ಲೈಟ್ ಭಾರತದ ಮೊದಲ ಸಿಂಗಲ್ ಡೋಸ್ ಕೊರೊನಾ ಲಸಿಕೆಯಾಗಿರಲಿದೆ. ವಿಶ್ವದ ಇತರೆ ಅನೇಕ ದೇಶಗಳಲ್ಲಿ ಈಗಾಗಲೇ ಸ್ಪುಟ್ನಿಕ್ ಲೈಟ್ಗೆ ಅನುಮತಿ ನೀಡಿವೆ. ಸ್ಪುಟ್ನಿಕ್ ಲೈಟ್ ಲಸಿಕೆಯನ್ನ ಪಡೆದ 28 ದಿನಗಳ ನಂತರದಿಂದ ಇದು ಕೊರೊನಾ ವಿರುದ್ಧ 79.4 ಪ್ರತಿಶತ ಪರಿಣಾಮಕಾರಿಯಾಗಿ ಕೆಲಸ ಮಾಡಲಾಗಿದೆ ಎಂದು ಅಧ್ಯಯನ ತಿಳಿಸಿದೆ. ಎರಡನೇ ಡೋಸ್ ಪಡೆಯದ ರಷ್ಯಾ ದೇಶದ ಜನತೆಯ ಮೇಲೆ ಮಾತ್ರ ಪ್ರಯೋಗವನ್ನ ಕೇಂದ್ರೀಕರಿಸಲಾಗಿತ್ತು. ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ವೇಳೆ ರಷ್ಯಾ, ಅರಬ್ ರಾಷ್ಟ್ರ ಹಾಗೂ ಘಾನಾ 7 ಸಾವಿರ ಮಂದಿಯನ್ನ ಪರಿಗಣಿಸಲಾಗಿತ್ತು.
ಸ್ಪುಟ್ನಿಕ್ ವಿ ಒಂದು ಸಿಂಗಲ್ ಡೋಸ್ ಲಸಿಕೆಯಾಗಿದ್ದು ಈ ಲಸಿಕೆಯಿಂದ ದೇಶಗಳಲ್ಲಿ ಲಸಿಕಾ ಅಭಿಯಾನಕ್ಕೆ ಇನ್ನಷ್ಟು ವೇಗ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.
ಈಗಾಗಲೇ ಹೈದರಾಬಾದ್ಗೆ 3 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಸಿಕೆಗಳು ರಷ್ಯಾದಿಂದ ಬಂದಿಳಿದಿವೆ. ಈಗಾಗಲೇ ದೇಶದಲ್ಲಿ ಸ್ಪುಟ್ನಿಕ್ ವಿ ಲಸಿಕೆಗಳನ್ನ ಜೂನ್ ಎರಡನೆ ವಾರದಿಂದ ಪೂರೈಕೆ ಮಾಡ್ತೇವೆ ಎಂದು ಅಪೋಲೋ ಆಸ್ಪತ್ರೆ ಘೋಷಣೆ ಮಾಡಿದೆ. ಪ್ರತಿ ಡೋಸ್ ಸ್ಪುಟ್ನಿಕ್ ವಿ ಲಸಿಕೆಗೆ ಅಂದಾಜು ಮೊತ್ತ 1195 ರೂಪಾಯಿಗಳನ್ನ ನಿಗದಿ ಮಾಡಲಾಗಿದೆ.