ಒಂದೇ ಮರದಲ್ಲಿ 121 ವಿಧದ ಮಾವಿನ ಹಣ್ಣುಗಳು ಬಿಟ್ಟ ಪ್ರಸಂಗದಿಂದ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಗ್ರಾಮವೊಂದು ಸುದ್ದಿಯಲ್ಲಿದೆ.
ಸಹರಾನ್ಪುರದ ಕಂಪನಿ ಬಾಗ್ ಪ್ರದೇಶದಲ್ಲಿರುವ 15 ವರ್ಷದ ಈ ಮರವು ಇದೀಗ ಸುದ್ದಿಯ ಕೇಂದ್ರವಾಗಿದೆ. ತೋಟಗಾರರ ಪರಿಶ್ರಮದ ಫಲವಾಗಿರುವ ಈ ವಿಶೇಷ ಮರದ ಮೇಲೆ ಐದು ವರ್ಷಗಳ ಹಿಂದೆ ವಿನೂತನ ಪ್ರಯೋಗವೊಂದನ್ನು ಮಾಡಲಾಗಿತ್ತು. ಭಿನ್ನ ರುಚಿಗಳ ಮಾವಿನಹಣ್ಣುಗಳನ್ನು ಒಂದೇ ಮರದಲ್ಲಿ ಬೆಳೆಯುವಂತೆ ಮಾಡಲಾದ ಈ ಪ್ರಯೋಗ ಯಶಸ್ವಿಯಾಗಿದೆ.
ನಿಜವಾಯ್ತು ತಾಯಿಯ ಶಂಕೆ; ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಮಗಳ ಕೊಲೆ ರಹಸ್ಯ
“ಹೊಸ ತಳಿಗಳ ಮೇಲೆ ನಾವು ಕೆಲಸ ಮಾಡುತ್ತಿದ್ದು, ಇದರಿಂದ ಮಾವಿನ ಹಣ್ಣಿನ ಇನ್ನಷ್ಟು ಸುಧಾರಿತ ತಳಿಗಳನ್ನು ಉತ್ಪಾದಿಸಬಹುದಾಗಿದೆ. ಸಾರ್ವಜನಿಕರು ಸಹ ಈ ತಂತ್ರವನ್ನು ಬಳಸಬಹುದಾಗಿದೆ” ಎಂದು ತೋಟಗಾರಿಕೆ ಹಾಗೂ ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ಭಾನುಪ್ರಕಾಶ್ ರಾಮ್ ತಿಳಿಸಿದ್ದಾರೆ.