ನವದೆಹಲಿ: ರಷ್ಯಾದ ಸ್ಪುಟ್ನಿಕ್ ಲೈಟ್ ಸಿಂಗಲ್ ಡೋಸ್ ಲಸಿಕೆಗೆ ಒಪ್ಪಿಗೆ ನೀಡಲಾಗಿದೆ. ಕೊರೋನಾ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಒಪ್ಪಿಗೆ ನೀಡಿದೆ. ಭಾರತದಲ್ಲಿ ಡಿಸಿಜಿಐ ನಿಂದ ಒಪ್ಪಿಗೆ ಪಡೆದ 9ನೇ ವ್ಯಾಕ್ಸಿನ್ ಇದಾಗಿದೆ.
ಹೈದರಾಬಾದ್ ನ ಡಾಕ್ಟರ್ ರೆಡ್ಡಿಸ್ ಲ್ಯಾಬ್ ನಿಂದ ಪ್ರಯೋಗ ನಡೆಸಲಾಗಿದೆ. ರಷ್ಯಾದ ಸ್ಪುಟ್ನಿಕ್ ಲೈಟ್ ಸಿಂಗಲ್ ಡೋಸ್ ಲಸಿಕೆಯ ಪ್ರಯೋಗ ನಡೆಸಲಾಗಿದೆ. ಈಗಾಗಲೇ ರಷ್ಯಾದ ಸ್ಪುಟ್ನಿಕ್ –V ಲಸಿಕೆಗೆ ಒಪ್ಪಿಗೆ ನೀಡಲಾಗಿದ್ದು, ಭಾರತದಲ್ಲಿ 6.5 ಲಕ್ಷ ಜನರು ಸ್ಪುಟ್ನಿಕ್ –V ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈಗ ಸ್ಪುಟ್ನಿಕ್ ಲೈಟ್ ಲಸಿಕೆಗೂ ಒಪ್ಪಿಗೆ ನೀಡಲಾಗಿದೆ.