ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಧೂಮಪಾನ ಸೇವನೆಗೆ ಕಡಿವಾಣ ಹಾಕಲು ಸಂಸತ್ತಿನ ಸ್ಥಾಯಿ ಸಮಿತಿ ಮಹತ್ವದ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ.
ಸಿಂಗಲ್ ಸಿಗರೇಟ್ ಮಾರಾಟಕ್ಕೆ ಬ್ರೇಕ್ ಹಾಕಲು ಶಿಫಾರಸ್ಸು ಮಾಡಲಾಗಿದ್ದು, ಜೊತೆಗೆ ವಿಮಾನ ನಿಲ್ದಾಣಗಳಲ್ಲಿನ ಧೂಮಪಾನ ವಲಯವನ್ನು ಮುಚ್ಚುವಂತೆಯೂ ಸಲಹೆ ನೀಡಿದೆ.
ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಧೂಮಪಾನದ ಚಟಕ್ಕೆ ಬಲಿಯಾಗುತ್ತಿದ್ದು, ಸಿಂಗಲ್ ಸಿಗರೇಟ್ ಮಾರಾಟ ಬ್ಯಾನ್ ಮಾಡಿದರೆ ಸೇವನೆ ಕಡಿಮೆಯಾಗಬಹುದು ಎಂಬ ಉದ್ದೇಶ ಇದರ ಹಿಂದಿದೆ.
ಇದು ಜಾರಿಗೆ ಬಂದರೆ ಸಿಗರೇಟ್ ಅನ್ನು ಸಿಂಗಲ್ ಖರೀದಿಸುವುದಕ್ಕೆ ಕಡಿವಾಣ ಬೀಳಲಿದ್ದು, ಪ್ಯಾಕ್ ಮಾತ್ರ ಖರೀದಿಸಬೇಕಾಗುತ್ತದೆ.