ನವದೆಹಲಿ: ಸಿಂಘು ಗಡಿಯಲ್ಲಿ ರೈತರ ಲಖಬೀರ್ ಸಿಂಗ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣಾ ಪೊಲೀಸರಿಗೆ ಆರೋಪಿ ನಿಹಾಂಗ್ ಸಮುದಾಯದ ಸದಸ್ಯ ಸರಬ್ಜಿತ್ ಸಿಂಗ್ ಪೊಲೀಸರಿಗೆ ಶರಣಾಗಿದ್ದಾನೆ. ಪವಿತ್ರ ಗ್ರಂಥಕ್ಕೆ ಅವಮಾನ ಮಾಡಿದ್ದಕ್ಕೆ ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಪಾದ, ಎಡಗೈ ಕತ್ತರಿಸಿ ಲಖಬೀರ್ ಸಿಂಗ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಶವವನ್ನು ಬ್ಯಾರಿಕೇಡ್ ಗೆ ನೇತು ಹಾಕಲಾಗಿತ್ತು. ದೆಹಲಿ -ಹರಿಯಾಣ ಸಂಪರ್ಕಿಸುವ ಸಿಂಘು ಗಡಿಯ ಕುಂಡ್ಲಿಯಲ್ಲಿ ನಡೆದ ಹತ್ಯೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು.
ಈ ಪ್ರಕರಣದ ಆರೋಪಿ ನಿಹಾಂಗ್ ಸರಬ್ಜಿತ್ ಸಿಂಗ್ ಪೊಲೀಸರಿಗೆ ಶರಣಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನಿಹಾಂಗ್ ಸಮುದಾಯದ ಸದಸ್ಯ ಸರಬ್ಜಿತ್ ಸಿಂಗ್ ನನ್ನು ಇಂದು ಸೋನಿಪತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಮೃತ ಲಖ್‌ಬೀರ್ ಸಿಂಗ್ ಪಂಜಾಬ್‌ನ ಟಾರ್ನ್ ತರನ್‌ನ ಚೀಮಾ ಖುರ್ದ್ ಹಳ್ಳಿಯ ಕಾರ್ಮಿಕನಾಗಿದ್ದು, ಸುಮಾರು 35 ವರ್ಷ ವಯಸ್ಸಿನವರಾಗಿದ್ದರು.