alex Certify ಮತ್ತೆ ಒಂದಾಗಲಿದೆ ಬ್ಲಾಕ್ ಬ್ಲಾಸ್ಟರ್ ಜೋಡಿ: ರೋಹಿತ್ ಶೆಟ್ಟಿ – ಅಜಯ್ ದೇವಗನ್ ಕಾಂಬಿನೇಷ್‌ನಲ್ಲಿ ಬರಲಿದೆ ಸಿಂಗಂ 3 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಒಂದಾಗಲಿದೆ ಬ್ಲಾಕ್ ಬ್ಲಾಸ್ಟರ್ ಜೋಡಿ: ರೋಹಿತ್ ಶೆಟ್ಟಿ – ಅಜಯ್ ದೇವಗನ್ ಕಾಂಬಿನೇಷ್‌ನಲ್ಲಿ ಬರಲಿದೆ ಸಿಂಗಂ 3

ದೃಶ್ಯಂ-2 ಇತ್ತಿಚೆಗೆ ಸೂಪರ್ ಹಿಟ್ ಆಗಿರುವ ಬಾಲಿವುಡ್ ಸಿನೆಮಾ. 2015ರಲ್ಲಿ ತೆರೆಕಂಡ ದೃಶ್ಯಂ ಸಿನೆಮಾದ ಮುಂದುವರೆದ ಭಾಗವೇ ದೃಶ್ಯಂ-2 . ಬಾಲಿವುಡ್‌ನಲ್ಲಿ ಸದ್ಯಕ್ಕೆ ತೆರೆಕಂಡ ಯಾವುದೇ ಸಿನೆಮಾಗಳು ಸೂಪರ್‌ಹಿಟ್‌ ಆಗಿರಲಿಲ್ಲ. ಆದರೆ ದೃಶ್ಯಂ-2 ಹಿಟ್ ಆಗಿದ್ದು, ಬಾಲಿವುಡ್‌ ನಲ್ಲಿ ಹೊಸ ಸಂಚಲನ ಮೂಡುವಂತೆ ಮಾಡಿದೆ.

ದೃಶ್ಯಂ-2 ಸಿನೆಮಾದಲ್ಲಿ ನಟ ಅಜಯ್‌ ದೇವಗನ್‌ ಮನೋಜ್ಞ ನಟನೆಗೆ ಎಲ್ಲರೂ ಫಿದಾ ಆಗ್ಹೋಗಿದ್ದಾರೆ. ಆಗಲೇ ಅಜಯ್ ದೇವಗನ್ ಅಭಿಮಾನಿಗಳಿಗೆ ಇನ್ನೊಂದು ಗುಡ್‌ನ್ಯೂಸ್‌ ಸಿಕ್ಕಿದೆ. ಅಜಯ್‌ ದೇವಗನ್‌ ಈ ಹಿಂದೆ ನಟಿಸಿದ್ದ ಸಿಂಗಂ ಸಿನೆಮಾ ಪಾರ್ಟ್-3 ತೆರೆಗೆ ಬರಲಿದ್ದು, ಈ ಸಿನೆಮಾ ಸಿಂಗಂ ಪಾರ್ಟ್- 1 ನಿರ್ದೇಶನ ಮಾಡಿದ್ದ ರೋಹಿತ್ ಶೆಟ್ಟಿ ಮಾಡಲಿದ್ದಾರೆ.

ಈಗಾಗಲೇ ಸಿಂಗಂ ಸಿನೆಮಾ ರೋಹಿತ್ ಶೆಟ್ಟಿ ಮತ್ತು ಅಜಯ್ ದೇವಗನ್ ಕಾಂಬಿನೆಷ್‌ನಲ್ಲಿ ಬಂದಿದ್ದು, ಅದು ಯಾವ ರೀತಿ ಸೂಪರ್ ಡೂಪರ್ ಹಿಟ್ ಆಗಿತ್ತೋ, ಅದೇ ರೀತಿ ಈ ಸಿನೆಮಾ ಕೂಡಾ ಹಿಟ್ ಆಗಲಿದೆ ಅನ್ನೋ ನಿರೀಕ್ಷೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.

ಒಂದು ಮಾಹಿತಿ ಪ್ರಕಾರ ನಟ ಅಜಯ್ ದೇವಗನ್ ಈಗ ”ಭೋಲಾ” ಸಿನೆಮಾದಲ್ಲಿ ಬ್ಯುಸಿ ಇದ್ದು, ಈ ಸಿನೆಮಾದ ಚಿತ್ರೀಕರಣ ಮುಗಿದಾಕ್ಷಣ ಸಿಂಗಂ ಸಿಕ್ವೆಲ್ ಸಿನೆಮಾ ಆಗಿರೋ ಸಿಂಗಂ ಅಗೈನ್‌ ಸಿನೆಮಾದಲ್ಲಿ ನಟಿಸಲಿದ್ದಾರೆ.

2010ರಲ್ಲಿ ಸಿಂಗಂ ಸಿನೆಮಾ ತಮಿಳು ಭಾಷೆಯಲ್ಲಿ ತೆರೆಕಂಡಿದ್ದು, ಅದೇ ಸಿನೆಮಾ ಹಿಂದಿಯಲ್ಲಿ ನಟ ಅಜಯ್‌ ದೇವಗನ್‌ ನಾಯಕತ್ವದಲ್ಲಿ ರಿಲೀಸ್ ಆಗಿತ್ತು. ಆ ನಂತರ ಸಿಂಗಂ ರಿಟರ್ನ್ಸ್ ಕೂಡಾ ಬಂದಿದ್ದು, ಇವೆರಡು ಸಿನೆಮಾಗಳು ಅಜಯ್ ದೇವಗನ್ ಮತ್ತು ನಿರ್ದೇಶಕ ರೋಹಿತ್ ಕಾಂಬಿನೇಷ್‌ನಲ್ಲಿ ಮೂಡಿ ಬಂದಿದ್ದು, ಈ ಎರಡೂ ಸಿನೆಮಾಗಳು ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗಿತ್ತು.

ಈಗ ಮತ್ತೆ ಇದೇ ಜೋಡಿ ಸಿಂಗಂ ಪಾರ್ಟ್-3 ಮಾಡುತ್ತಿದ್ದರಿಂದ, ಅಭಿಮಾನಿಗಳು ಈ ಸಿನೆಮಾದಿಂದ ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್‌ನಲ್ಲಿ ಇನ್ನೊಂದು ಹಿಟ್ ಸಿನೆಮಾ ಆದಷ್ಟು ಬೇಗ ಸಿಗೋದು ಗ್ಯಾರಂಟಿ ಅನ್ನುತ್ತಿದ್ದಾರೆ, ಅಜಯ್ ಮತ್ತು ರೋಹಿತ್ ಅಭಿಮಾನಿಗಳು.

Ajay Devgn, Rohit to team up for the third installment of 'Singham'

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...