ಹಾವಿನ ಹೆಸರು ಕೇಳ್ತಿದ್ದಂತೆ ಬೆವರು ಬರುತ್ತದೆ. ಹಾವು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಭಯ. ಮನೆಯಲ್ಲಿ ಹಾವು ಕಾಣಿಸಿಕೊಂಡ್ರೆ ನಡುಗಿ ಹೋಗೋದು ಸಾಮಾನ್ಯ. ಅದೂ ಬೆಡ್ ರೂಮಿನಲ್ಲಿ ಹಾವು ಕಾಣಿಸಿಕೊಂಡ್ರೆ ಏನಾಗಬೇಡ ಹೇಳಿ.
ಸಿಂಗಾಪುರದಲ್ಲಿ ಮಹಿಳೆಯೊಬ್ಬಳ ಬೆಡ್ ರೂಮಿನಲ್ಲಿ ಹಾವು ಕಾಣಿಸಿಕೊಂಡಿದೆ. ಹಾವಿನ ಶಬ್ಧ ಕೇಳ್ತಿದ್ದಂತೆ ಮಹಿಳೆ ಕಂಗಾಲಾಗಿದ್ದಾಳೆ. ನಂತ್ರ ರಕ್ಷಣಾ ತಂಡಕ್ಕೆ ಕರೆ ಮಾಡಿದ್ದಾಳೆ. ರಕ್ಷಣಾ ತಂಡ ಬಂದು ಪರಿಶೀಲನೆ ನಡೆಸಿದಾಗ ಕಂಗಾಲಾಗಿದ್ದಾರೆ. ರಕ್ಷಣಾ ಸಿಬ್ಬಂದಿ ಬಂದಾಗ ಮನೆಯಲ್ಲಿರುವುದು ಹಾವಲ್ಲ ಎಂಬುದು ಗೊತ್ತಾಗಿದೆ.
ಮಹಿಳೆ ಬಾತ್ ರೂಮಿನಿಂದ ಬರ್ತಿದ್ದ ಶಬ್ಧ ಆಕೆ ಬ್ರೆಶ್ ನದ್ದು ಎಂಬುದು ಗೊತ್ತಾಗಿದೆ. ಆಕೆ ಎಲೆಕ್ಟ್ರಿಕ್ ಟೂತ್ ಬ್ರಷ್ ಬಳಸುತ್ತಿದ್ದಳಂತೆ. ಅದರಲ್ಲಿ ನೀರು ಹೋಗಿದ್ದರಿಂದ ಶಬ್ಧ ಬರ್ತಿತ್ತಂತೆ. ಆ ಶಬ್ಧ ಹಾವಿನ ಶಬ್ಧದಂತೆ ಕೇಳ್ತಿತ್ತು ಎನ್ನಲಾಗಿದೆ.
ಮಹಿಳೆಯ ಮಲಗುವ ಕೋಣೆಯಲ್ಲಿದ್ದ ಓರಲ್ ಬಿ ಯ ವಿದ್ಯುತ್ ಬ್ರಷನ್ನು ರಕ್ಷಣಾ ತಂಡ ಪತ್ತೆ ಮಾಡಿದೆ. ಬ್ರಷ್ ಆನ್ ಮತ್ತು ಆಫ್ ಮಾಡಿ ನೋಡಿದ ನಂತರ ಅದು ವಿಷಪೂರಿತ ನಾಗರ ಹಾವಿನ ಶಬ್ದವಲ್ಲ, ಟೂತ್ ಬ್ರಷ್ ನ ಸದ್ದು ಎಂದು ತಿಳಿದುಬಂದಿದೆ. ವಿಷ್ಯ ಗೊತ್ತಾದ್ಮೇಲೆ ನಾಚಿಕೊಂಡ ಮಹಿಳೆ, ರಕ್ಷಣಾ ಸಿಬ್ಬಂದಿ ಕ್ಷಮೆ ಕೇಳಿದ್ದಾಳೆ.