ಸಿಂಗಪುರ: ಸಿಂಗಪುರದ ವ್ಯಕ್ತಿಯೊಬ್ಬರು ಪ್ರೀತಿಸುತ್ತಿದ್ದ ಯುವತಿ ಮದುವೆಯನ್ನು ನಿರಾಕರಿಸಿದ್ದಾಗಿ ಆಕೆಯ ಮೇಲೆ ಕೇಸ್ ಹಾಕಿದ್ದಾರೆ! ತಮಗೆ $3 ಮಿಲಿಯನ್ (ಅಂದಾಜು 24 ಕೋಟಿ ರೂಪಾಯಿ) ಪರಿಹಾರ ನೀಡಬೇಕು ಎಂದು ಕೇಸ್ನಲ್ಲಿ ತಿಳಿಸಿದ್ದಾನೆ.
ಕೆ.ಕೌಶಿಗನ್ ಎಂದು ಗುರುತಿಸಲಾದ ವ್ಯಕ್ತಿ ನೋರಾ ತಾನ್ ಎಂಬ ಯುವತಿಯನ್ನು 2016 ರಲ್ಲಿ ಭೇಟಿಯಾಗಿದ್ದರು. ಅಲ್ಲಿಂದ ಅವರು ಮಾತುಕತೆ ಆರಂಭಿಸಿದರು. ನೋರಾ ಈ ವ್ಯಕ್ತಿಯನ್ನು ಕೇವಲ ಸ್ನೇಹಿತ ಅಂದುಕೊಂಡಿದ್ದರೆ ಕೌಶಿಗನ್ ಆಕೆಯನ್ನು ಪ್ರೀತಿಸತೊಡಗಿದರು.
ನಂತರ ಪ್ರೇಮ ನಿವೇದನೆ ಮಾಡಿಕೊಂಡಾಗ ಅದನ್ನು ಯುವತಿ ನಿರಾಕರಿಸಿದ್ದಾಳೆ. ನಮ್ಮದು ಬರಿಯ ಸ್ನೇಹ, ಪ್ರೇಮವಲ್ಲ ಎಂದಿದ್ದಾಳೆ. ಇದರಿಂದ ರೊಚ್ಚಿಗೆದ್ದಿರುವ ಕೌಶಿಗನ್ ಆಕೆ ನನ್ನ ಪ್ರೇಮವನ್ನು ನಿರಾಕರಿಸಿದ್ದರಿಂದ ನಾನು ಮಾನಸಿಕ ಖಿನ್ನತೆಗೆ ಹೋಗಿದ್ದೇನೆ. ನಂತರ ಆಕೆ ನನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು. ಇದರಿಂದ ನನ್ನ ಬದುಕು ಜರ್ಜರಿತರವಾಗಿದೆ ಎಂದು ದೂರಿ ಕೋರ್ಟ್ ಮೊರೆ ಹೋಗಿದ್ದಾರೆ.
ನನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಭಾರಿ ಪರಿಹಾರ ನೀಡಬೇಕು ಎಂದು ಕೋರಿದ್ದು, ಇದರ ವಿಚಾರಣೆ ನಡೆಯುತ್ತಿದೆ.