alex Certify ʼಕೋವಿಡ್ʼ​ ಸೋಂಕಿದ್ದರೂ ಮಾಸ್ಕ್​​ ತೆರೆದು ಕೆಮ್ಮಿದ ವ್ಯಕ್ತಿಗೆ ಜೈಲು ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೋವಿಡ್ʼ​ ಸೋಂಕಿದ್ದರೂ ಮಾಸ್ಕ್​​ ತೆರೆದು ಕೆಮ್ಮಿದ ವ್ಯಕ್ತಿಗೆ ಜೈಲು !

ಕೋವಿಡ್​ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಮಾಸ್ಕ್​ ಧರಿಸದೇ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದನ್ನು ಒಪ್ಪಿಕೊಂಡ ಭಾರತೀಯ ಮೂಲದ 64 ವರ್ಷದ ಸಿಂಗಾಪುರದ ವ್ಯಕ್ತಿಗೆ ಎರಡು ವಾರಗಳ ಜೈಲುಶಿಕ್ಷೆ ವಿಧಿಸಲಾಗಿದೆ.

2021ರಲ್ಲಿ ಕೋವಿಡ್​ ಸೋಂಕಿಗೆ ಒಳಗಾಗಿದ್ದ ತಮಿಳುಸೆಲ್ವಂ ರಾಮಯ್ಯ ಉದ್ದೇಶಪೂರ್ವಕವಾಗಿ ಮಾಸ್ಕ್​ ಧರಿಸದೇ ತಮ್ಮ ಸಹೋದ್ಯೋಗಿಗಳ ಎದುರು ಕೆಮ್ಮಿದ್ದರು. ತಾನು ಧರಿಸಿದ್ದ ಮಾಸ್ಕ್​ನ್ನು ಮೂಗು ಹಾಗೂ ಬಾಯಿಯಿಂದ ಕೆಳಕ್ಕೆ ಇಳಿಸಿ ಕೆಮ್ಮಿದ್ದರು ಎನ್ನಲಾಗಿದೆ.

ತಮಿಳುಸೆಲ್ವಂರಿಗೆ ಶಿಕ್ಷೆ ನೀಡುವ ಸಂದರ್ಭದಲ್ಲಿ ಅವರ ಮೇಲೆ ಇನ್ನೆರಡು ಆರೋಪಗಳನ್ನು ಹೊರಿಸಲಾಗಿದೆ ಎನ್ನಲಾಗಿದೆ. ಈ ಅಪರಾಧವನ್ನು ಎಸಗುವ ಸಂದರ್ಭದಲ್ಲಿ ತಮಿಳುಸೆಲ್ವಂ ಲಿಯಾಂಗ್ ಹಪ್​ ಸಿಂಗಾಪುರದಲ್ಲಿ ಕ್ಲೀನರ್​ ಆಗಿ ಕೆಲಸ ಮಾಡುತ್ತಿದ್ದರು ಎಂದು ನ್ಯಾಯಾಲಯವು ಮಾಹಿತಿ ನೀಡಿದೆ.

ಸಹೋದ್ಯೋಗಿಯೊಬ್ಬರು ತಮಿಳುಸೆಲ್ವಂರಿಗೆ ಪರೀಕ್ಷೆ ನಡೆಸಿದ್ದು ಆಗ ವರದಿಯು ಕೋವಿಡ್​ ಪಾಸಿಟಿವ್​ ಎಂದು ಬಂದಿತ್ತು ಎನ್ನಲಾಗಿದೆ. 2021ರ ಅಕ್ಟೋಬರ್​ 18ರಂದು ತಮಿಳುಸೆಲ್ವಂ ಅಸ್ವಸ್ಥರಾಗಿದ್ದರು. ಈ ವೇಳೆ ಸಹೋದ್ಯೋಗಿ ಅವರಿಗೆ ಕೋವಿಡ್​ ಪರೀಕ್ಷೆ ಮಾಡಿದಾಗ ಪಾಸಿಟಿವ್​ ವರದಿ ಬಂದಿತ್ತು. ಇದಾದ ಬಳಿಕ ಈ ವರದಿಯನ್ನು ಲಾಜಿಸ್ಟಿಕ್ಸ್​ನ ವ್ಯವಸ್ಥಾಪಕರಿಗೆ ಮನೆಗೆ ಕಳಿಸುವಂತೆ ಸೂಚಿಸಲಾಗಿತ್ತು.

ತಮಿಳುಸೆಲ್ವಂರಿಗೆ ಕೋವಿಡ್​ ಪಾಸಿಟಿವ್​ ವರದಿ ಬಂದಿದೆ ಎಂಬುದನ್ನು ಬೇರೊಬ್ಬರಿಂದ ತಿಳಿದ ವ್ಯವಸ್ಥಾಪಕ ತಮಿಳುಸೆಲ್ವಂರಿಗೆ ಮನೆಗೆ ತೆರಳುವಂತೆ ಹೇಳಿದ್ದಾರೆ. ಆದರೆ ತಮಿಳುಸೆಲ್ವಂ ತಕ್ಷಣ ಮನೆಗೆ ಹೋಗಲಿಲ್ಲ. ಬದಲಾಗಿ ಅವರು ತಮ್ಮ ಕೋವಿಡ್​ 19 ಪರೀಕ್ಷಾ ವರದಿ ಬಗ್ಗೆ ಲಾಜಿಸ್ಟಿಕ್ಸ್​ ಮ್ಯಾನೇಜರ್​ಗೆ ತಿಳಿಸಲು ಕಂಪನಿಯ ಕಚೇರಿಗೆ ಬಂದಿದ್ದರು ಎನ್ನಲಾಗಿದೆ.

ಕಂಪನಿಯ ಡ್ರೈವರ್​ ಜೊತೆಯಲ್ಲಿ ತಮಿಳುಸೆಲ್ವಂ ಕಚೇರಿಗೆ ಆಗಮಿಸಿದ್ದರು. ಚಾಲಕನಿಗೆ ಇವರು ಸೋಂಕಿತ ವ್ಯಕ್ತಿ ಎಂಬುದರ ಅರಿವು ಇರಲಿಲ್ಲ. ವ್ಯವಸ್ಥಾಪಕರನ್ನು ಭೇಟಿಯಾಗುತ್ತಿದ್ದಂತೆಯೇ ಅವರು ಮನೆಗೆ ಹೋಗುವಂತೆ ತಮಿಳುಸೆಲ್ವಂಗೆ ಸೂಚನೆ ನೀಡಿದ್ದರು. ಅಲ್ಲದೇ ಕಚೇರಿ ಬಾಗಿಲನ್ನು ಕ್ಲೋಸ್​ ಮಾಡಿದರು.

ಮೊದಲು ವ್ಯವಸ್ಥಾಪಕರ ಎದುರು ಮಾಸ್ಕ್​ ಹಾಕಿಕೊಂಡು ಕೆಮ್ಮಿದ ತಮಿಳುಸೆಲ್ವಂ ಬಳಿಕ ಮಾಸ್ಕ್ ತೆಗೆದು ವ್ಯವಸ್ಥಾಪಕರ ಎದುರು ಉದ್ದೇಶಪೂರ್ವಕವಾಗಿ ಕೆಮ್ಮಿದ್ದರು ಎನ್ನಲಾಗಿದೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿಯೂ ಸೆರೆಯಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...