ಮಹಿಳೆಯರಿಗೆ ಗರ್ಭಿಣಿಯಾದ ಸಂದರ್ಭದಲ್ಲಿ ಹಾರ್ಮೋನುಗಳ ಏರುಪೇರಿನಿಂದಾಗಿ ಮುಖದ ಸೌಂದರ್ಯ ಹಾಳಾಗುವ ಸಾಧ್ಯತೆ ದಟ್ಟವಾಗಿರುತ್ತೆ.
ಮೊಡವೆ, ಮುಖ ಸುಕ್ಕುಗಟ್ಟುವಿಕೆ, ಚರ್ಮ ಕಪ್ಪಗಾಗೋದು ಹೀಗೆ ಒಂದೊಂದೆ ಸಮಸ್ಯೆಗಳು ಶುರುವಾಗುತ್ತದೆ. ಹಾಗಂತ ಪೇಟೆಯಲ್ಲಿ ಸಿಗುವ ರಾಸಾಯನಿಕಗಳು ನಿಮ್ಮ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು. ಹೀಗಾಗಿ ಮನೆಯಲ್ಲೇ ಇರುವ ಪದಾರ್ಥಗಳನ್ನ ಬಳಸಿ ಫೇಸ್ಪ್ಯಾಕ್ ಬಳಸುವ ಮೂಲಕ ನಿಮ್ಮ ಮುಖದ ಸೌಂದರ್ಯವನ್ನ ಕಾಪಾಡಬಹುದಾಗಿದೆ.
ನಿಮ್ಮದೇನಾದರೂ ಎಣ್ಣೆಯಂಶ ಇರುವ ಮುಖವಾಗಿದ್ದರೆ ಬಾಳೆಹಣ್ಣಿನ ಫೇಸ್ಮಾಸ್ಕ್ ನಿಮಗೆ ಹೆಚ್ಚು ಸೂಕ್ತ. ಇದಕ್ಕಾಗಿ ನೀವು ಬಾಳೆಹಣ್ಣಿನ ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ, ಸ್ವಲ್ಪ ನಿಂಬೆ ರಸವನ್ನ ಸೇರಿಸಿ. ಈ ಮಾಸ್ಕ್ನ್ನು ಹಣೆಯಿಂದ ಕುತ್ತಿಗೆಯವರೆಗೆ ಹಚ್ಚಿಕೊಳ್ಳಿ. ಬಳಿಕ ಬೆಚ್ಚನೆಯ ನೀರಿನಲ್ಲಿ ಮುಖವನ್ನ ತೊಳೆದುಕೊಳ್ಳಿ.
ಮುಖದ ಕಾಂತಿಯನ್ನ ಹೆಚ್ಚಿಸೋಕೆ ಸೌತೆಕಾಯಿ ಹಾಗೂ ಕಲ್ಲಂಗಡಿ ಸೂಕ್ತ ಎಂಬ ವಿಚಾರ ಎಲ್ಲರಿಗೂ ತಿಳಿಸಿದೆ. ಹೀಗಾಗಿ ನೀವು 2 ಚಮಚ ಸೌತೆಕಾಯಿ ರಸ, 2 ಚಮಚ ಕಲ್ಲಂಗಡಿ ರಸ, 1 ಚಮಚ ಮೊಸರು, 1 ಚಮಚ ಹಾಲಿನ ಪೌಡರ್ಗಳನ್ನ ಮಿಶ್ರಣ ಮಾಡಿ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಸೌತೆಕಾಯಿ ರಸ ಟೋನರ್ ರೀತಿಯಲ್ಲಿ ಕಾರ್ಯ ಮಾಡೋದ್ರಿಂದ ನೀವು ರಾತ್ರಿ ವೇಳೆ ಇದನ್ನ ಮುಖಕ್ಕೆ ಹಚ್ಚಿ ಕೂಡ ಮಲಗಬಹುದು.
ಹಣ್ಣಿನಿಂದ ಅಲರ್ಜಿ ಇರುವವರು ನೀವಾಗಿದ್ದಾರೆ ಬಾದಾಮಿ & ಜೇನುತುಪ್ಪದ ಮಾಸ್ಕ್ನ್ನು ನೀವು ಬಳಕೆ ಮಾಡಬಹುದು. ಇದಕ್ಕಾಗಿ ನೀವು ನಾಲ್ಕು ಬಾದಾಮಿಯನ್ನ ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಇದನ್ನ ಪುಡಿ ಮಾಡಿ ಬಳಿಕ ಜೇನುತುಪ್ಪ ಸೇರಿಸಿ. ಈ ಪ್ಯಾಕ್ನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳವರೆಗೆ ಕಾಯಿರಿ. ಬಳಿಕ ಮುಖವನ್ನ ತೊಳೆದುಕೊಳ್ಳಿ.