ಮೊಟ್ಟೆಯಿಂದ ಮಾಡುವ ತಿನಿಸುಗಳ ವಾಸನೆ ಪಾತ್ರೆಯಿಂದ ಬೇಗ ಹೋಗಲಾರದು. ಎಷ್ಟೇ ಸೋಪ್ ಬಳಸಿ ಉಜ್ಜಿದರೂ ಮಾರನೇ ದಿನ ಮತ್ತೆ ವಾಸನೆ ಮೂಗಿಗೆ ಬಡಿಯುತ್ತದೆ. ಅದನ್ನು ಹೋಗಲಾಡಿಸಲು ಈ ಟ್ರಿಕ್ಸ್ ಗಳನ್ನು ಉಪಯೋಗಿಸಿ.
ನಿಂಬೆ ಹಣ್ಣು
ಮೊಟ್ಟೆ ಬೇಯಿಸಿದ ಪಾತ್ರೆಯನ್ನು ನಿಂಬೆ ಹಣ್ಣು ಅಥವಾ ರಸ ಬಳಸಿ ಚೆನ್ನಾಗಿ ತೊಳೆಯಿರಿ. ಇದರಿಂದ ವಾಸನೆ ಹೋಗುವುದು.
ಕಡಲೆ ಹಿಟ್ಟು
ಪಾತ್ರೆಗೆ ಕಡಲೆ ಹಿಟ್ಟು ಹಾಕಿ ಹತ್ತು ನಿಮಿಷ ಹಾಗೇ ಬಿಡಿ. ಬಳಿಕ ಮಾಮೂಲಾಗಿ ಪಾತ್ರೆ ತೊಳೆದುಕೊಳ್ಳುವಂತೆ ತೊಳೆದುಕೊಳ್ಳಿ. ಆಗ ವಾಸನೆ ಚೂರು ಬರುವುದಿಲ್ಲ.
ಚಾರ್ ಧಾಮ್ ಯಾತ್ರೆ: ಕೇವಲ ಆರು ದಿನದಲ್ಲೇ 20 ಯಾತ್ರಾರ್ಥಿಗಳ ಸಾವು
ಕಾಫಿ ಪೌಡರ್
ಮೊಟ್ಟೆ ಹಾಕಿದ ಪಾತ್ರೆಗೆ ಸ್ವಲ್ಪ ಕಾಫಿ ಪೌಡರ್ ಹಾಕಿ ಉಜ್ಜಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ಪಾತ್ರೆ ತೊಳೆದುಕೊಳ್ಳಿ.
ವಿನೇಗರ್
ವಾಸನೆ ಬರುವ ಪಾತ್ರೆಗಳಿಗೆ ಸ್ವಲ್ಪ ವಿನೇಗರ್ ದ್ರಾವಣ ಹಚ್ಚಿ ಹಾಗೇ ಬಿಡಿ. ನಂತರ ಮಾಮೂಲಾಗಿ ತೊಳೆದುಕೊಂಡರೂ ವಾಸನೆ ಮಾಯವಾಗುತ್ತದೆ.