ಬೆಂಗಳೂರು : ಸರಳ’ ವೈದ್ಯ ಡಾ. ಸಿ. ಎನ್. ಮಂಜುನಾಥ್ ತನ್ನ ಅತಿಯಾದ ಹಣಕಾಸನ್ನು ಸಮರ್ಥಿಸಿಕೊಳ್ಳಬೇಕು ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ನಟ ಚೇತನ್ ಅಹಿಂಸಾ ”ಸಾಮಾಜಿಕ ಕಾಳಜಿಗೆ ಹೆಸರುವಾಸಿಯಾದ ಡಾ. ಸಿ. ಎನ್. ಮಂಜುನಾಥ ಅವರು ಸುಮಾರು 100 ಕೋಟಿ ರೂ. ಆಸ್ತಿಯನ್ನು ಘೋಷಿಸಿದ್ದಾರೆ. ವರ್ಷಕ್ಕೆ 20 ಲಕ್ಷ ಗಳಿಸುವ ಸರ್ಕಾರಿ ವೈದ್ಯರು 35 ವರ್ಷಗಳಲ್ಲಿ 7 ಕೋಟಿ ರೂ ಗಳಿಸುತ್ತಾರೆ.ಸೇವೆಯೇ ಆದ್ಯತೆಯಾಗಿದ್ದಾಗ ಒಬ್ಬರ ಬಳಿ ಇಷ್ಟೊಂದು ಹಣ ಇರುವುದು ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ‘ಸರಳ’ ವೈದ್ಯರು ತನ್ನ ಅತಿಯಾದ ಹಣಕಾಸನ್ನು ಸಮರ್ಥಿಸಿಕೊಳ್ಳಬೇಕು” ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.