ಸಾಕಷ್ಟು ವಿಳಂಬದ ನಂತರ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಿಂಪಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಅಂತಿಮವಾಗಿ ತಮ್ಮ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸಿಂಪಲ್ ಒನ್ ವಿತರಣೆಯನ್ನು ಪ್ರಾರಂಭಿಸಿದೆ. ಬೆಂಗಳೂರಿನಲ್ಲಿ ಮೊದಲ ಬ್ಯಾಚ್ ನಲ್ಲಿ ಮಾಲೀಕರು ಬೈಕ್ ಡೆಲಿವರಿ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಈ ಸ್ಕೂಟರ್ ಬೆಂಗಳೂರಿನಲ್ಲಿ ಮಾತ್ರ ಮಾರಾಟವಾಗುತ್ತಿದೆ.
ಇದನ್ನು ಹಂತ ಹಂತವಾಗಿ ಹೆಚ್ಚಿನ ನಗರಗಳಲ್ಲಿ ಪ್ರಾರಂಭಿಸಲಾಗುವುದು. ಸಿಂಪಲ್ ಒನ್‌ಗಾಗಿ ಬುಕ್ಕಿಂಗ್‌ಗಳು 18 ತಿಂಗಳ ಹಿಂದೆ ಪ್ರಾರಂಭವಾಗಿದ್ದವು ಮತ್ತು ಈಗ 1 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ನೋಂದಾಯಿಸಿವೆ.
ಮೊದಲ ಬೈಕ್ ಡೆಲಿವರಿ ಸಂದರ್ಭದಲ್ಲಿ ಮಾತನಾಡಿದ ಸಿಂಪಲ್ ಎನರ್ಜಿಯ ಸಂಸ್ಥಾಪಕ ಮತ್ತು ಸಿಇಒ ಸುಹಾಸ್ ರಾಜ್‌ಕುಮಾರ್, ಬೆಂಗಳೂರಿನಲ್ಲಿ ಗ್ರಾಹಕರೊಂದಿಗೆ ಪ್ರಾರಂಭವಾಗುವ ಸಿಂಪಲ್ ಒನ್‌ನ ವಿತರಣೆಯನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಗ್ರಾಹಕರಿಗೆ ಸುಸ್ಥಿರ ಮತ್ತು ಸಮರ್ಥ ಸಾರಿಗೆ ಆಯ್ಕೆಯಾಗಿರುವ ಉತ್ಪನ್ನವನ್ನು ರಚಿಸುವಲ್ಲಿ ನಮ್ಮ ತಂಡದ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಬಗ್ಗೆ ನಾವೆಲ್ಲರೂ ಹೆಮ್ಮೆಪಡುತ್ತೇವೆ. ನಮ್ಮ ಗ್ರಾಹಕರಿಗೆ ಸಂತೋಷಕರವಾದ ಮಾಲೀಕತ್ವದ ಅನುಭವವನ್ನು ಸೃಷ್ಟಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ ಮತ್ತು ಹಸಿರು ಭವಿಷ್ಯವನ್ನು ರಚಿಸುವ ಮೂಲಕ ಸಿಂಪಲ್ ಒನ್ ವಿಭಾಗದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ ಎಂದು ನಾವು ನಂಬುತ್ತೇವೆ ಎಂದರು.
ಸಿಂಪಲ್ ಒನ್ ಅನ್ನು ಬ್ರೆಜನ್ ಬ್ಲಾಕ್, ನಮ್ಮ ರೆಡ್, ಅಜುರೆ ಬ್ಲೂ ಮತ್ತು ಗ್ರೇಸ್ ವೈಟ್‌ನ ನಾಲ್ಕು ಸಿಂಗಲ್ ಟೋನ್ ಬಣ್ಣಗಳ ಆಯ್ಕೆಗಳಲ್ಲಿ ಪ್ರಸ್ತುತಪಡಿಸಲಾಗಿದೆ.