ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಆಟೋಮೊಬೈಲ್ ಕ್ಷೆತ್ರದಲ್ಲಿ ಇವಿಗಳದ್ದೇ ಭರಾಟೆ ಎಂಬಂತೆ ಆಗಿಬಿಟ್ಟಿದೆ.
ಸ್ವಾತಂತ್ರ‍್ಯ ದಿನಾಚರಣೆಯಂದು ಸಿಂಪಲ್ ಒನ್ ಹೆಸರಿನಲ್ಲಿ ಎಲೆಕ್ಟ್ರಿಕ್ ಬೈಕ್ ಒಂದನ್ನು ಸಿಂಪಲ್ ಎನರ್ಜಿ ಬಿಡುಗಡೆ ಮಾಡಿದೆ. ಇವಿ ಸ್ಕೂಟರ್‌ಗಳ ಬ್ಯಾಟರಿ ಅಷ್ಟಾಗಿ ಮೈಲೇಜ್ ಕೊಡುವುದಿಲ್ಲ ಎಂಬ ಮಾತುಗಳಿಗೆ ಅಪವಾದವೆಂಬಂತೆ ಸಿಂಪಲ್ ಎನರ್ಜಿ, ಸುದೀರ್ಘಾವಧಿ ಬಾಳಿಕೆ ಬರುವ ಬ್ಯಾಟರಿಯನ್ನು ಸ್ಕೂಟರ್‌ನಲ್ಲಿ ಅಳವಡಿಸಿದೆ ಎಂದು ಹೇಳಿಕೊಂಡಿದೆ.
ಒಮ್ಮೆ ಚಾರ್ಜ್ ಮಾಡಿದರೆ 236 ಕಿಮೀ ಮೈಲೇಜ್ ಕೊಡಬಲ್ಲ ಬ್ಯಾಟರಿಯನ್ನು ಸಿಂಪಲ್ ಒನ್ ಸ್ಕೂಟರ್ ಹೊಂದಿದ್ದು, ಇಕೋ ಮೋಡ್‌ನಲ್ಲಿ 203 ಕಿಮೀ ಹಾಗೂ ಐಡಿಸಿ ಮೋಡ್‌ನಲ್ಲಿ 236 ಕಿಮೀ ಕ್ರಮಿಸಲಿದೆ ಎನ್ನಲಾಗಿದೆ. ಈ ಸ್ಕೂಟರ್‌ನ ಟಾಪ್ ಸ್ಪೀಡ್ 98-105 ಕಿಮೀ/ಗಂಟೆಯಷ್ಟಿದೆ.
ಈ ಬೈಕಿನ ಬೆಲೆಯು 1,10,000 ರೂಪಾಯಿಗಳಷ್ಟಿದ್ದು, ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.
ಮುಂಬರುವ ದಿನಗಳಲ್ಲಿ 13 ರಾಜ್ಯಗಳಲ್ಲಿ ಬ್ಯಾಟರಿ ಚಾರ್ಜ್ ಮಾಡಲು ಮೂಲ ಸೌಕರ್ಯ ಸೃಷ್ಟಿ ಮಾಡುವುದಾಗಿ ಸಿಂಪಲ್ ಎನರ್ಜಿ ತಿಳಿಸಿದೆ.